ಭಾರತೀಯ ಹೊಸ ನೋಟು ಒಮನ್ ಮಾರ್ಕೆಟ್‌ನಲ್ಲಿ ಲಭ್ಯ

Update: 2016-12-08 10:31 GMT

ಮಸ್ಕತ್, ಡಿ. 8: 2000ರೂಪಾಯಿಯ ಭಾರತದ ಹೊಸ ನೋಟುಗಳು ಒಮನ್‌ನ ವಿವಿಧ ವಿನಿಮಯ ಸಂಸ್ಥೆಗಳಿಗೆ ತಲುಪಲಾರಂಭಿಸಿವೆ. ಆದರೆ ಕೆಲವು ವಿನಿಮಯ ಸಂಸ್ಥೆಗಳು ಮಾತ್ರವೇ ಈ ವ್ಯವಹಾರವನ್ನು ಅಲ್ಲಿ ನಡೆಸುತ್ತಿವೆ. ವ್ಯವಹಾರ ನಡೆಸಲು ಅಗತ್ಯವಾದ ಸರಕಾರದ ಮಾರ್ಗದರ್ಶನವನ್ನು ಕೆಲವು ವಿನಿಮಯ ಸಂಸ್ಥೆಗಳು ಕಾಯುತ್ತಿವೆ. ಭಾರತದ ಹೊಸ ನೊಟು ಪಡೆಯುವುದು ಮತ್ತು ಕೊಡುವುದು ಸದ್ಯಕ್ಕೆ ಬೇಡವೆಂದು ವಿನಿಮಯ ಸಂಸ್ಥೆಗಳು ನಿರ್ಧರಿಸಿವೆ.

ಊರಿನಿಂದ ಮರಳಿ ಬರುವವರುವಿನಿಮಯ ಸಂಸ್ಥೆಗಳಿಗೆ 2000ರೂಪಾಯಿ ನೋಟುಗಳನ್ನು ನೀಡುತ್ತಾರೆ. ಆದರೆ ನೋಟುಗಳನ್ನು ವಿತರಣೆ ನಡೆಸುತ್ತಿರುವ ಏಜೆನ್ಸಿಗಳು ಭಾರೀ ಕಮಿಶನ್ ತೆಗೆದುಕೊಳ್ಳುತ್ತಿರುವುದರಿಂದ ಇಂತಹ ಏಜೆನ್ಸಿಗಳಿಂದ ಒಮನ್‌ನ ವಿನಿಮಯ ಸಂಸ್ಥೆಗಳು ಭಾರತೀಯ ರೂಪಾಯಿ ಪಡೆಯಲು ಪ್ರಾರಂಭಿಸಿಲ್ಲ. ಭಾರತದಿಂದ ರಜೆ ಮುಗಿಸಿ ಮರಳುವವರು ವಿಮಾನ ನಿಲ್ದಾಣದ ನಮ್ಮ ಶಾಖೆಯಲ್ಲಿ ದಿನಾಲೂ ಭಾರೀ ಸಂಖೆಯ ವಿನಿಮಯ ನಡೆಸುತ್ತಿದ್ದಾರೆ ಎಂದು ಅಲ್ ಜದೀದ್ ಎಕ್ಸ್‌ಚೇಂಜ್ ಜನರಲ್ ಮ್ಯಾನೇಜರ್ ಬಿ.ರಾಜನ್ ಹೇಳಿದ್ದಾರೆ. ಪ್ರತಿದಿನ ಒಂದುಲಕ್ಷರೂಪಾಯಿವರೆಗೂ ಹೀಗೆ ಲಭಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಎರಡು ವಾರಗಳಿಂದ ಹೀಗೆ ನಮಗೆ ನೋಟುಗಳು ಸಿಗತೊಡಗಿವೆ. ಆದ್ದರಿಂದ ಬಹಳಷ್ಟು ಮುಂಚೆಯೇ ನಾವು ವಿನಿಮಯ ವ್ಯವಹಾರ ಆರಂಭಿಸಿದ್ದೇವೆ ಎಂದು ರಾಜನ್ ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News