×
Ad

ಯುಎಇಯಲ್ಲಿ ಮೀಲಾದುನ್ನೆಬಿ ರಜೆ ಘೋಷಣೆ

Update: 2016-12-08 17:12 IST

ದುಬೈ, ಡಿ. 8: ಪ್ರವಾದಿಜನ್ಮದಿನಾಚರಣೆ ಪ್ರಯುಕ್ತ ಯುಎಇಯಲ್ಲಿ ಡಿಸೆಂಬರ್ 11 ರವಿವಾರದಂದು(ರಬೀವುಲ್ ಅವ್ವಲ್ 12) ಸಾರ್ವಜನಿಕ ರಜೆ ಘೋಷಿಸಲಾಗಿದೆ. ಸಾರ್ವಜನಿಕ, ಖಾಸಗಿ ಕ್ಷೇತ್ರದಲ್ಲಿ ಸಂಬಳ ಸಹಿತ ರಜೆ ನೀಡಲಾಗಿದೆ ಎಂದು ವರದಿಯಾಗಿದೆ. ಸರಕಾರಿ ಕಚೇರಿಗಳು,ಸಚಿವಾಲಯಗಳು, ವಿವಿಧ ಇಲಾಖೆಗಳ ಕೇಂದ್ರ ಕಚೇರಿಗಳು, ವಿದ್ಯಾಸಂಸ್ಥೆಗಳು ಮುಂತಾದವುಗಳಿಗೆ ರಜೆ ಘೋಷಿಸಲಾಗಿದೆ ಎಂದು ಫೆಡರಲ್ ಅಥಾರಿಟಿ ಫಾರ್ ಗಮರ್ನ್‌ಮೆಂಟ್ ಹ್ಯೂಮನ್ ರಿಸೋರ್ಸ್ ತಿಳಿಸಿದೆ.

ಮಾನವಸಂಪನ್ಮೂಲ ಸಚಿವ ಸಖರ್ ಗೊಬಾಷ್ ಖಾಸಗಿ ಕ್ಷೇತ್ರದ ರಜೆಯನ್ನು ಘೋಷಿಸಿದ್ದು, ಇದರೊಂದಿಗೆ ಮುಂದಿನ ವಾರಂತ್ಯದಲ್ಲಿ ದೇಶದ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳಿಗೆ ನಿರಂತರ ಮೂರು ದಿನಗಳ ರಜೆ ದೊರೆಯುತ್ತದೆ. ಶನಿವಾರ ರಜೆ ಇರುವ ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೂ ಮೂರುದಿನಗಳ ರಜೆ ದೊರೆಯಲಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News