ಮಸ್ಕತ್‌ನಲ್ಲಿ ಬ್ಯಾಂಕ್ ದರೋಡೆ
ಮಸ್ಕತ್, ಡಿ. 9: ಬ್ಯಾಂಕ್ ಮಸ್ಕತ್‌ನ ರುಮೈಸ್ ಶಾಖೆಯಲ್ಲಿ ದರೋಡೆ ನಡೆದಿದೆ ಎಂದು ವರದಿಯಾಗಿದೆ ಗುರುವಾರ ಬೆಳಗ್ಗೆ ಎಂಟು ಗಂಟೆಯ ಹೊತ್ತಿಗೆ ಶಸ್ತ್ರಧಾರಿಗಳಾದ ಮುಖವಾಡ ಧರಿಸಿದ್ದ ದರೋಡೆ ತಂಡ ಬ್ಯಾಂಕ್ ಕೊಳ್ಳೆ ಹೊಡೆದಿದೆ. ಈ ತಂಡದಲ್ಲಿ ಕನಿಷ್ಠ ಮೂವರಿದ್ದರು ಎಂದು ಬ್ಯಾಂಕ್ ಅಧಿಕಾರಿಗಳು ನೀಡಿದ ಅಧಿಕೃತ ಮಾಹಿತಿಯಾಗಿದೆ. ಬ್ಯಾಂಕ್‌ನಿಂದ ಎಷ್ಟು ಹಣ ದರೋಡೆಯಾಗಿದೆ ಎಂಬುದನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ. ರಾಯಲ್ ಒಮನ್ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಬ್ಯಾಂಕ್‌ನ ಹಿಂಬಾಗಿಲ ಮೂಲಕ ಒಳಕ್ಕೆ ಪ್ರವೇಶಿಸಿದ ತಂಡ ಬ್ಯಾಂಕಿನಲ್ಲಿದ್ದವರನ್ನೆಲ್ಲ ಬೆದರಿಸಿ ಹೊರಗೆ ಹೋಗುವಂತೆ ಮಾಡಿ ದರೋಡೆಗೈದಿದೆ. ದರೋಡೆಕೋರರು ಕಪ್ಪಬಣ್ಣದವರು ಮತ್ತು ಇಂಗ್ಲಿಷ್ ಮಾತಾಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಪೊಲೀಸರಿಗೆ ತಿಳಿಸಿದ್ದಾರೆ. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಬ್ಯಾಂಕ್‌ನೌಕರರಲ್ಲೊಬ್ಬರು ಘಟನೆಯ ವೇಳೆ ಪ್ರಜ್ಞೆ ಕಳಕೊಂಡಿದ್ದಾರೆ. ಘಟನೆಯಿಂದ ಯಾರಿಗೂ ಅಪಾಯವಾಗದಿರುವುದಕ್ಕಾಗಿ ಬ್ಯಾಂಕ್ ಅಧಿಕಾರಿಗಳು ದೇವನಿಗೆ ಕೃತಜ್ಞತೆ ತಿಳಿಸಿದ್ದಾರೆ. 2013 ಆಗಸ್ಟ್‌ನಲ್ಲಿ ಮಸ್ಕತ್‌ನಿಂದ 250 ಕಿಮೀ ದೂರದ ಇಬ್ರಿ ಪ್ರಾಂತದ ಅಲ್ ಹಯಾಲ್ ಬ್ಯಾಂಕ್‌ನ್ನು ಆರು ಮಂದಿಯ ತಂಡ ದೋಚಿದ ಘಟನೆ ಈ ಹಿಂದೆ ನಡೆದಿತ್ತು. ನಂತರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. 2013 ಮಾರ್ಚ್‌ನಲ್ಲಿ ಬಿದಬಿದ್ ಪ್ರಾಂತದ ಬ್ಯಾಂಕ್ ಮಸ್ಕತ್‌ನ ಫಂಜ ಶಾಖೆಯಲ್ಲಿ ದರೋಡ ಕೃತ್ಯ ಯತ್ನ ನಡೆದಾಗ ಬ್ಯಾಂಕ್ ನೌಕರರೇ ಅದನ್ನು ವಿಫಲಗೊಳಿಸಿದ್ದರು.ಇಲ್ಲಿ ಒಬ್ಬ ಅರಬ್ ದೇಶದ ಪ್ರಜೆ ದರೋಡೆಗೆ ಯತ್ನಿಸಿ ಸಿಕ್ಕಿಬಿದ್ದಿದ್ದ. 2010ರಲ್ಲಿ ಬಾಶ್ ಪ್ರಾಂತದಲ್ಲಿ ಬ್ಯಾಂಕ್ ಮಸ್ಕತ್‌ನ ಗಾಲ ಶಾಖೆಯಲ್ಲಿ ಮುಖವಾಡದ ಧರಿಸಿದ ತಂಡ ದರೋಡೆ ನಡೆಸಿ 48,000 ರಿಯಾಲ್ ದೋಚಿ ಪರಾರಿಯಾಗಿತ್ತು ಎಂದು ವರದಿ ತಿಳಿಸಿದೆ.