ರಿಯಾದ್ ನಲ್ಲಿ “ಮರೆಯದಿರೋಣ ಬಾಬರಿ ಮಸೀದಿ” ಕಾರ್ಯಕ್ರಮ
ರಿಯಾದ್, ಡಿ.11: ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧನದ ಮೇಲೆ ಕಪ್ಪು ಚುಕ್ಕಿಯಾದ ಬಾಬರಿ ಮಸೀದಿಯು ದ್ವಂಸವಾಗಿ 24 ವರ್ಷಗಳು ಕಳೆದರು ನ್ಯಾಯವು ಮರೀಚಿಕೆಯಾಗಿದೆ. ಈ ಅನ್ಯಾಯವನ್ನು ಮತ್ತೆ ನೆನೆಪಿಸುವ ಸಲುವಾಗಿ ಸೌದಿ ಅರೇಬಿಯದ ರಾಜಧಾನಿ ರಿಯಾದ್ ನಲ್ಲಿ ಇಂಡಿಯಾ ಫ್ರೆಟರ್ನಿಟಿ ಫಾರಂ, ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಡಿ.6ರಂದು “ಮರೆಯದಿರೋಣ ಬಾಬರಿ ಮಸೀದಿ” ಎಂಬ ಬೃಹತ್ ಸಾರ್ವಜನಿಕ ಕಾರ್ಯಕ್ರಮವನ್ನು ರಿಯಾದನ್ ಬತ್ತ ಪ್ರದೇಶದಲ್ಲಿರುವ ಹೋಟೆಲ್ ಪ್ಯಾರಗಾನ್ ಸಭಾಂಗಣದಲ್ಲಿ ಜರುಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಇಂಡಿಯನ್ ಸೋಶಿಯಲ್ ಫಾರಮ್ ರಿಯಾದ್ ಇದರ ಕೇಂದ್ರ ಸಮಿತಿ ಅಧ್ಯಕ್ಷರಾದ ಬಶೀರ್ ನೇರವೆರಿಸಿ ಮಾತನಾಡಿದ ಅವರು, ಜಾತ್ಯಾತಿತ ಮೌಲ್ಯಗಳ ಮೇಲೆ ಭರವಸೆ ಇಡುವ ಯಾವುದೇ ಭಾರತೀಯನಿಗೂ ಬಾಬರಿ ಮಸೀದಿ ಧ್ವಂಸ ಮರೆಯುವುದು ಅಸಾಧ್ಯವೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿ ಆಗಮಿಸಿದ ಇಂಡಿಯಾ ಫ್ರೆಟರ್ನಿಟಿ ಫಾರಂ, ಕರ್ನಾಟಕ ರಾಜ್ಯ ಸಮಿತಿಯ ಸದಸ್ಯರಾದ ನವೀದ್ ಕುಂದಾಪುರ ರವರು ಮಾತನಾಡಿ, ಬಾಬರಿ ಮಸೀದಿ ದ್ವಂಸದ ಹಿನ್ನೆಲೆಯನ್ನು ಎಳೆ ಎಳೆಯಾಗಿ ವಿವರಿಸಿದರು. ’ಬಾಬರಿ ಮಸೀದಿ ದ್ವಂಸವು ಸರಕಾರ ಮತ್ತು ಸಂಘಪರಿವಾರವು ನಡೆಸಿದ ವ್ಯವಸ್ಥಿತ ಷಡ್ಯಂತ್ರದ ಭಾಗವಾಗಿದೆ. ಅಂದಿನ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮೃದು ಧೋರಣೆ, ರಕ್ಷಣಾಪಡೆ, ಪೋಲಿಸ್ ಅಧಿಕಾರಿಗಳ ಪರೋಕ್ಷ ಸಹಕಾರ ಫ್ಯಾಶಿಸ್ಟರಿಗೆ ಈ ವಿದ್ವಂಸಕ ಕೃತ್ಯ ಮಾಡಲು ನೆರವಾಯಿತು. ಬಾಬರಿ ಮಸೀದಿಯನ್ನು ಕಳೆದುಕೊಳ್ಳುವುದು ದೇಶದಲ್ಲಿರುವ ಇತರ ಪ್ರಾಥನಾಲಯಗಳನ್ನು ಬಹುದೊಡ್ದ ಗಂಡಾಂತರಕ್ಕೆ ತಳ್ಳಿದಂತೆ ಎಂದು ಹೇಳಿದರು .
ಬಾಬರಿ ಮಸೀದಿ ಈ ದೇಶದ ಅಭಿಮಾನ ಮತ್ತು ಜಾತ್ಯತೀತೆಯ ಸಂಕೇತ. ಆದುದರಿಂದ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇಟ್ಟ ಈ ದೇಶದ ಪ್ರಜೆಗಳು ಇನ್ನೂ ನ್ಯಾಯದ ನೀರಿಕ್ಷೆಯಲ್ಲಿದ್ದಾರೆ. ಕೇಂದ್ರ ಸರಕಾರಕ್ಕೆ ದೇಶದ ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಇದ್ದಲ್ಲಿ ಬಾಬರಿ ಮಸೀದಿಯನ್ನು ಪುನರ್ ನಿರ್ಮಿಸಲಿ ಮತ್ತು ನ್ಯಾಯಲಯ ಆರೋಪಿಗಳೆಂದು ಸಾರಿದ ಮಸೀದಿ ದ್ವಂಸಕರಿಗೆ ಶಿಕ್ಷೆ ಕೊಡುವ ಎದೆಗಾರಿಕೆ ತೋರಿಸಲಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಇಂಡಿಯಾ ಫ್ರೆಟರ್ನಿಟಿ ಫಾರಂ, ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷ ಇಸ್ಮಾಯಿಲ್ ಇನೊಳಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಾಬರಿ ಮಸೀದಿ ದ್ವಂಸವು ಇಡೀ ನ್ಯಾಯಾಂಗ ವ್ಯವಸ್ಥೆಗೆ ಸವಾಲಾಗಿದೆ. ಲಿಬರ್ಹಾನ್ ಆಯೋಗವು ಸೂಚಿಸಿದ ಆರೋಪಿಗಳೇ ಇಂದು ಕೇಂದ್ರದ ಮಂತ್ರಿಗಳಾಗಿರುವುದು ಅತ್ಯಂತ ವಿಪರ್ಯಾಸವಾಗಿದೆ. ಕೇಂದ್ರ ಸರಕಾರದ ಅವೈಜ್ಞಾನಿಕ ನೋಟು ಅಮಾನ್ಯದಿಂದಾಗಿ ದೇಶದಲ್ಲೆಡೆ ಅಘೋಷಿತ ತುರ್ತು ಪರಿಸ್ಥಿತಿ ಎದುರಾಗಿದೆ. ಸಂವಿಧಾನವು ನೀಡಿದ ಮುಸ್ಲಿಮರ ವೈಯಕ್ತಿಕ ಕಾನೂನಿನ ಮೇಲೆ ಕೇಂದ್ರ ಸರಕಾರದ ಹಸ್ತಕ್ಷೇಪವು ಖಂಡನೀಯವೆಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಇಂಡಿಯನ್ ಸೋಶಿಯಲ್ ಫಾರಮ್ ಕರ್ನಾಟಕ ರಾಜ್ಯ ಸಮಿತಿ ಕಾರ್ಯದರ್ಶಿ ಶರೀಫ್ ಕಬಕ ಉಪಸ್ಥಿತರಿದ್ದರು.
ಇಂಡಿಯಾ ಫ್ರೆಟರ್ನಿಟಿ ಫಾರಂನ ಸದಸ್ಯ ಇರ್ಫಾನ್ ಉಪ್ಪಿನಂಗಡಿ ಅಥಿತಿಗಳನ್ನು ಸ್ವಾಗತಿಸಿದರು. ಇಂಡಿಯಾ ಫ್ರೆಟರ್ನಿಟಿ ಫಾರಂ, ಕರ್ನಾಟಕ ರಾಜ್ಯ ಸಮಿತಿಯ ಸದಸ್ಯ ಜನಾಬ್ ಹಾರಿಸ್ ಅಂಗರಗುಂಡಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.