×
Ad

ಡಿ.ಕೆ.ಎಸ್.ಸಿ "ಗ್ರಾಂಡ್ ಕರಾವಳಿ ಪ್ಯಾಮಲಿ ಮುಲಾಖತ್" ಇದರ ಕರ ಪತ್ರ ಬಿಡುಗಡೆ

Update: 2016-12-15 16:23 IST

ದುಬೈ, ಡಿ.15: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್  ಯು.ಎ.ಇ  ವತಿಯಿಂದ ಡಿ.ಕೆ.ಎಸ್.ಸಿ  ಜನವರಿ 1ರಂದು ಶಾರ್ಜಾ ಮಹಲ್ ರಸ್ತೆಯಲ್ಲಿರುವ ಬಿನ್ ಆಯಿಷ್ ವೆಡ್ಡಿಂಗ್ ಹಾಲ್ ನಲ್ಲಿ "ಗ್ರಾಂಡ್ ಕರಾವಳಿ ಫ್ಯಾಮಿಲಿ ಮುಲಾಖತ್" ನಡೆಯಲಿದೆ.

ಇದರ ಅಂಗವಾಗಿ  ಫ್ಯಾಮಿಲಿ ಮುಲಾಖತ್ ಕಮಿಟಿ ಇದರ ಚೆಯರ್ಮೆನ್ ಜನಾಬ್.ಲತೀಫ್ ಮುಲ್ಕಿ  ಅಧ್ಯಕ್ಷತೆಯಲ್ಲಿ ಅವರ ನಿವಾಸದಲ್ಲಿ ಮೌಲೀದ್ ಪಾರಾಯಣದೊಂದಿಗೆ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.

ಈ ಸಭೆಯಲ್ಲಿ  ವಿಶೇಷ ಅತಿಥಿಗಳಾಗಿ ಆಗಮಿಸಿದ ಮರ್ಕಝ್ ಅಲ್ ಹುದಾ ಇದರ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಎಂ ಅಬ್ದುಲ್ ರಶೀದ್ ಸಖಾಫಿ ಝೈನಿ ಕಾಮಿಲ್ ರವರು "ಗ್ರಾಂಡ್ ಕರಾವಳಿ ಫ್ಯಾಮಿಲಿ ಮುಲಾಖತ್" ಇದರ ಕರ ಪತ್ರ ವನ್ನು ಬಿಡುಗಡೆಗೊಳಿಸಿದರು. ಈ ಸಮಾರಂಭದಲ್ಲಿ ಡಿ.ಕೆ.ಎಸ್.ಸಿ. ಯು.ಎ.ಇ. ರಾಷ್ಟೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾಬ್.ಇಕ್ಬಾಲ್ ಹೆಜಮಾಡಿ ಸ್ವಾಗತಿಸಿದರು.ಕಾರ್ಯಕ್ರಮದ ಬಗ್ಗೆ ಚೆಯರ್ಮೆನ್ ಜನಾಬ್.ಲತೀಫ್ ಮುಲ್ಕಿ ಹಾಗು ಕನ್ವೀನರ್ ಎಸ್.ಯೂಸುಫ್ ಆರ್ಲಪದವು ರವರು ವಿವರಿಸಿದರು.

ಈ ಸಂದರ್ಭದಲ್ಲಿ ಡಿ.ಕೆ.ಎಸ್.ಸಿ ಸೆಂಟ್ರಲ್ ಕಮಿಟಿ ಸದಸ್ಯಜಮಾಲ್ ಕಣ್ಣಂಗಾರ್, ಡಿ.ಕೆ.ಎಸ್.ಸಿ. ಶಾರ್ಜಾ ಯುನಿಟ್ ಅಧ್ಯಕ್ಷ ಬಷೀರ್ ಕಾಪಿಕ್ಕಾಡ್, ಕೋಶಾಧಿಕಾರಿ ಹಾಜಿ.ಅಬ್ದುಲ್ ರಹಿಮಾನ್ ಸಂಟ್ಯಾರ್, ಬಾರ್ ದುಬೈ ಯುನಿಟ್ ಅಧ್ಯಕ್ಷರಾದ ಇಸ್ಮಾಯಿಲ್ ಬಾಬಾ ಮೂಳೂರು, ದೇರಾ ಯುನಿಟ್ ಉಪಾಧ್ಯಕ್ಷರೂ ಮಿಲಾದ್ ಸ್ವಾಗತ ಸಮಿತಿ ಚೆಯರ್ಮೆನ್  ಶಕೂರು ಮನಿಲಾ, ಯೂತ್ ವಿಂಗ್ ಅಧ್ಯಕ್ಷ ಶೈಫುದ್ದೀನ್ ಪಟೇಲ್, ಅಬುಸಾಗರ್ ಯುನಿಟ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಸತ್ತಿಕಲ್, ಅಲ್ ಕ್ವಿಸಸ್ ಯುನಿಟ್ ಅಧ್ಯಕ್ಷ ಬದ್ರುದ್ದೀನ್ ಅರಂತೋಡು, ಅಜ್ಮಾನ್ ಯುನಿಟ್ ನ ನಜೀರ್ ಕಣ್ಣಂಗಾರ್, ಸಮೀರ್ ಕೊಳ್ನಾಡ್, ಅಬ್ದುಲ್ ರಹಿಮಾನ್ ಸಜಿಪ, ಇಬ್ರಾಹಿಂ ಅಗ್ನಾಡಿ ದುಬಾಲ್,  ಹಾಜಿ.ನವಾಝ್ ಕೋಟೆಕ್ಕಾರ್, ರಫೀಕ್ ಮುಲ್ಕಿ , ಅಬ್ದುಲ್ಲಾ ಪೆರುವಾಯಿ, ಅಬ್ಬಾಸ್ ಪಾಣಾಜೆ, ರಪೀಕ್ ಸಂಪ್ಯ, ಅಮಾನುಲ್ಲಾ ಕುಂದಾಪುರ, ಉಮ್ಮರ್ ಪಾಣಾಜೆ ಮತ್ತಿತರರು ಉಪಸ್ಥಿತರಿದ್ದರು. ಕಮಲ್ ಅಜ್ಜಾವರ ಕಾರ್ಯಕ್ರಮ ನಿರೂಪಿಸಿ ಕಮರುದ್ದೀನ್ ಗುರುಪುರ ಧನ್ಯವಾದ ಸಮರ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News