×
Ad

ಸಿರಿಯದ ಜನರಿಗೆ ಬೆಂಬಲ: ಕತರ್ ರಾಷ್ಟ್ರೀಯ ದಿನಾಚರಣೆ ರದ್ದು

Update: 2016-12-15 17:22 IST

ದೋಹ,ಡಿ. 15: ಡಿಸೆಂಬರ್ ಹದಿನೆಂಟಕ್ಕೆ ನಡೆಯಬೇಕಿದ್ದ ಕತರ್ ರಾಷ್ಟ್ರೀಯ ದಿನಾಚರಣೆಯನ್ನು ರದ್ದುಗೊಳಿಸಲಾಗಿದೆ ಎಂದು ಅಮೀರ್ ಶೇಖ್ ತಮೀಂ ಹಮದ್ ಬಿನ್ ಅಲ್ಥಾನಿ ಹೇಳಿದ್ದಾರೆಎಂದು ವರದಿಯಾಗಿದೆ. ಸಿರಿಯದ ಪೂರ್ವ ಅಲಪ್ಪೊದಲ್ಲಿ ಸಿರಿಯ ಸರಕಾರ ನಡೆಸುತ್ತಿರುವ ಕೌರ್ಯಕ್ಕೆ ಬಲಿಯಾಗುತ್ತಿರುವ ಜನರಿಗೆ ಬೆಂಬಲವನ್ನು ಸೂಚಿಸಿ ಈ ತಿರ್ಮಾನವನ್ನು ಕತರ್ ತಳೆದಿದೆ. ಪೆರೇಡ್ ,ವೈಮಾನಿಕ ಅಭ್ಯಾಸಗಳ ಸಹಿತ ರಾಷ್ಟ್ರ ದಿನಾಚರಣೆಯನ್ನು ಉಜ್ವಲಗೊಳಿಸಲು ಅಗತ್ಯವಾದ ಸಿದ್ಧತೆಗಳನ್ನು ತಿಂಗಳ ಹಿಂದೆ ಮಾಡುತ್ತಾ ಬರಲಾಗಿದೆ. ಈ ನಡುವೆ ಕತರ್ ಹೊಸ ತೀರ್ಮಾನವನ್ನು ಕೈಗೊಂಡಿದೆ.

ದಮನಕ್ಕೊಳಗಾಗುವ ಅಲೊಪ್ಪೊದ ಮನುಷ್ಯರಿಗೆ ಬೆಂಬಲವನ್ನು ಸೂಚಿಸಿ ಕತರ್ ರಾಷ್ಟ್ರದಿನಾಚರಣೆಯನ್ನು ರದ್ದುಗೊಳಿಸುತ್ತಿರುವುದಾಗಿ ಅಮೀರ್ ಕತರ್ ಸುದ್ದಿ ಸಂಸ್ಥೆಯ ಮೂಲಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಗತ್ಯ ವಸ್ತುಗಳು, ಆರೋಗ್ಯ ಸೇವೆಗಳನ್ನು ನಿಷೇಧಿಸುವ ಮೂಲಕ ನಾಗರಿಕರನ್ನು ಹಸಿದಿರುವಂತೆ ಮಾಡಿ ಬಾಂಬ್ ಮಳೆಗೆರೆದು ಕೊಲ್ಲುವ ಕೃತ್ಯಗಳನ್ನು ಸಿರಿಯದ ಸರಕಾರ ಮತ್ತು ಅದರ ಮಿತ್ರರು ಮುಂದುವರಿಸುತ್ತಿದ್ದಾರೆ ಎಂದು ಕತರ್ ವಿಶ್ವಸಂಸ್ಥೆ ಸಹಿತ ಜಾಗತಿಕ ವೇದಿಕೆಯಲ್ಲಿ ಪ್ರಸ್ತಾಪಿಸಿದೆ. ಜಾಗತಿಕ ಆತ್ಮಸಾಕ್ಷಿಯ ಸಕ್ರಿಯ ಶ್ರದ್ಧೆ ಮತ್ತು ಮಧ್ಯಪ್ರವೇಶ ಸಿರಿಯನ್ ಜನತೆಗೆ ಅಗತ್ಯವಿದೆ ಎಂದು ಕತರ್ ನಿರಂತರ ಘೋಷಿಸುತ್ತಾ ಬಂದಿದೆ. ಈ ವರ್ಷ ಜನವರಿಯಲ್ಲಿ ಸಿರಿಯದ ಮನುಷ್ಯರ ಸಮಸ್ಯೆಗಳನ್ನು ಎತ್ತಿಹಿಡಿದು ಕತರ್ ವಿದೇಶ ಸಚಿವ ವಿಶ್ವಸಂಸ್ಥೆಗೆ ಪತ್ರ ಬರೆದಿದ್ದರು. ಜೊತೆಗೆ ಕತರ್‌ನ ಸ್ವಯಂಸೇವಾ ಸಂಘಟನೆಗಳಾದ ರಾಫ್, ಈದ್ ಚ್ಯಾರಿಟಿ, ಕತರ್ ಚ್ಯಾರಿಟಿ ಸಿರಿಯದ ಜನರಿಗೆ ಆಹಾರ ಇತ್ಯಾದಿ ಸಹಾಯ ಒದಗಿಸುತ್ತಿತ್ತು.

ಕಳೆದ ಮೇಯಲ್ಲಿ ಕತರ್ ಚ್ಯಾರಿಟಿ ಮತ್ತು ಕುರ್‌ಆನ್ ರೇಡಿಯೊ ಜಂಟಿಯಾಗಿ ನಡೆಸಿದ ತಫ್ರೀಜ್ ಕುರ್ಬ ರಿಲೀಫ್ ಅಭಿಯಾನದ ಮೂಲಕ 55ಲಕ್ಷ ಕತರ್ ರಿಯಾಲ್ ನೆರವು ಫಂಡ್‌ನ್ನು ಒದಗಿಸಿದೆ. ಸಿರಿಯ ಸರಕಾರ ಬಾಂಬು ಸುರಿದು ನಾಶಪಡಿಸಿರುವ ಸಿರಿಯದ ಅಲಪ್ಪೋ ನಿವಾಸಿಗಳ ಪುನರ್ವಸತಿಗಾಗಿ ಈ ಹಣವನ್ನು ಬಳಸಲಾಗುತ್ತಿದೆ. ಕಳೆದ ಮೇ ತಿಂಗಳ ಐದಕ್ಕೆ ಅಲಪ್ಪೊ ನಗರದ ನಿವಾಸಿಗಳಿಗೆ ಬೆಂಬಲವನ್ನು ಘೋಷಿಸಿ ಕತರ್‌ನ ಪ್ರಸಿದ್ಧ ಟೋರ್ಪ್‌ಟವರ್‌ಗೆ ಕೆಂಪು ಬಣ್ಣ ಹೊದಿಸಿದ್ದು ಕೂಡಾ ಗಮನಾರ್ಹವಾದ ಇನ್ನೊಂದು ಘಟನೆಯಾಗಿತ್ತು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News