ರಿಯಾದ್ ನಲ್ಲಿ ಟ್ರಕ್‌ಗಳ ಢಿಕ್ಕಿ: ಭಾರತೀಯರ ಸಹಿತ ನಾಲ್ಕು ಮಂದಿ ಸುಟ್ಟು ಭಸ್ಮ
ರಿಯಾದ್,ಡಿ. 15: ನಗರದಲ್ಲಿ ಟ್ರಕ್‌ಗಳೆರಡು ಢಿಕ್ಕಿಯಾದಪರಿಣಾಮ ಇಬ್ಬರು ಭಾರತೀಯರ ಸಹಿತ ನಾಲ್ವರು ಮೃತರಾಗಿದ್ದಾರೆಂದು ವರದಿಯಾಗಿದೆ. ಇಬ್ಬರು ಭಾರತೀಯರು ಗಾಯಗೊಂಡಿದ್ದಾರೆ. ಖುರೈಸ್ ರಸ್ತೆಯ ಎಕ್ಸಿಟ್ 30ರಲ್ಲಿ ಸಲ್ಮಾನ್ ಫಾರಿಸಿ ಅಂಡರ್ ಪ್ಯಾಸೇಜ್ ಸಮೀಪ ಬುಧವಾರ ಬೆಳಗ್ಗೆ ಮೂರುಗಂಟೆಗೆ ಅಪಘಾತ ಸಂಭವಿಸಿತ್ತು.
ಮೃತರಲ್ಲಿ ಒಬ್ಬರು ಪಾಕಿಸ್ತಾನದ ಪ್ರಜೆಯಾಗಿದ್ದಾರೆ.ಮೃತನಾದ ನಾಲ್ಕನೆ ವ್ಯಕ್ತಿಯ ಕುರಿತು ವಿವರಗಳು ಲಭಿಸಿಲ್ಲ. ಪ್ರಮುಖ ನಿರ್ಮಾಣ ಕಂಪೆನಿಯ ರಸ್ತೆಗೆ ಟಾರು ಹಾಕಲು ಬಳಸುತ್ತಿದ್ದ ಟ್ರಕ್ ಕೆಟ್ಟು ಹೋದ್ದರಿಂದ ಅದನ್ನು ರಸ್ತೆಯಲ್ಲಿಯೇ ನಿಲ್ಲಿಸಲಾಗಿತ್ತು. ಟ್ರಕ್‌ನಲಿದ್ದವರು ತಿಳಿಸಿದ ಪ್ರಕಾರ ಕಂಪೆನಿಯಮೆಕಾನಿಕ್‌ಗಳು ಬಂದು ದುತಸ್ತಿ ನಡೆಸುತ್ತಿದ್ದಾಗ ಹಿಂದಿನಿಂದ ಬಂದ ಪೆಟ್ರೋಲ್ ಟ್ಯಾಂಕರ್ ಟ್ರಕ್‌ಗೆ ಢಿಕ್ಕಿ ಹೊಡೆದಿತ್ತು.
ಇದರ ಹಿಂದಿನಿಂದ ಬಂದ ಇನ್ನೊಂದು ಟ್ರಕ್ ಢಿಕ್ಕಿಯಾಗಿತ್ತು. ಢಿಕ್ಕಿರಭಸಕ್ಕೆ ಬೆಂಕಿ ಹೊತ್ತಿದ ಪರಿಣಾಮ ಟ್ರಕ್ ಗಳು ಮತ್ತು ಪರಿಸರದಲ್ಲಿ ನಿಲ್ಲಿಸಿದ್ದ ಪಿಕ್‌ಅಪ್ ವ್ಯಾನ್ ಕೂಡ ಸುಟ್ಟು ಬೂದಿಯಾಗಿದೆ.
ಟ್ಯಾಂಕ್‌ರ ಸ್ಫೋಟಗೊಳ್ಳದೇ ಇದ್ದುದ್ದರಿಂದ ಭಾರೀ ಸಂಭಾವ್ಯ ದುರಂತ ತಪ್ಪಿಹೊಗಿದೆ. ಅಪಘಾತ ಸಂಭವಿಸಿದ್ದರಿಂದ ಈ ದಾರಿಯಲ್ಲಿ ವಾಹನಸಂಚಾರವನ್ನು ಬಹಳ ಹೊತ್ತು ನಿಷೇಧಿಸಲಾಗಿತ್ತು. ಮೃತದೇಹವನ್ನು ಗುರುತಿಸಲು ಸಾಧ್ಯವಿಲ್ಲದ ರೀತಿಯಲ್ಲಿ ಸುಟ್ಟುಹೊಗಿವೆ ಎಂದು ಸಿವಿಲ್ ಡಿಫೆನ್ಸ್ ತಿಳಿಸಿದೆ ಎಂದು ವರದಿಯಾಗಿದೆ.