×
Ad

ರಿಯಾದ್: ಮರಳು ಬಿರುಗಾಳಿ; ಕ್ಷೀಣ ದೃಗ್ಗೋಚರತೆ

Update: 2016-12-16 20:21 IST

ರಿಯಾದ್, ಡಿ. 16: ಸೌದಿ ಅರೇಬಿಯದ ರಾಜಧಾನಿ ರಿಯಾದ್‌ನಲ್ಲಿ ಗುರುವಾರ ಬಲವಾದ ಮರಳು ಬಿರುಗಾಳಿ ಬೀಸಿದ್ದು, ಒಂದು ಹಂತದಲ್ಲಿ ದೃಗ್ಗೋಚರತೆ 0.5 ಮೀಟರ್ ಆಗಿತ್ತು. ಜೊತೆಗೆ ವಾತಾವರಣವು 40 ಶೇಕಡ ಆರ್ದ್ರತೆಯಿಂದ ಕೂಡಿತ್ತು ಹಾಗೂ ಭಾಗಶಃ ಮೋಡಕವಿದ ವಾತಾವರಣವಿತ್ತು.

ಗಾಳಿಯು ಗಂಟೆಗೆ 20.4 ಕಿ.ಮೀ. ವೇಗದಲ್ಲಿ ಉತ್ತರ-ಈಶಾನ್ಯ ದಿಕ್ಕಿನಲ್ಲಿ ಬೀಸುತ್ತಿದ್ದು, ಮರಳನ್ನೂ ಜೊತೆಗೆ ಒಯ್ಯುತ್ತಿದೆ ಎಂದು ಹವಾಮಾನ ಮತ್ತು ಪರಿಸರ ಇಲಾಖೆ ತಿಳಿಸಿದೆ.

ಬಲವಾದ ಮರಳು ಬಿರುಗಾಳಿಯ ಹಿನ್ನೆಲೆಯಲ್ಲಿ ಅಪಘಾತಗಳು ಸಂಭವಿಸುವ ಸಾಧ್ಯತೆಯಿದ್ದು ಜಾಗರೂಕವಾಗಿ ವಾಹನಗಳನ್ನು ಚಲಾಯಿಸುವಂತೆ ಜನರಿಗೆ ಎಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News