ಜಿದ್ದಾ ಅಂತಾರಾಷ್ಟ್ರೀಯ ಪುಸ್ತಕ ಮೇಳಕ್ಕೆ ಚಾಲನೆ
Update: 2016-12-17 19:57 IST
ಜಿದ್ದಾ, ಡಿ. 17: ಮಕ್ಕಾ ಆಡಳಿತಗಾರ ಹಾಗೂ ಸೌದಿ ಅರೇಬಿಯ ದೊರೆ ಸಲ್ಮಾನ್‌ರ ಸಲಹಾಕಾರ ರಾಜಕುಮಾರ ಖಾಲಿದ್ ಅಲ್-ಫೈಸಲ್ ಗುರುವಾರ ಎರಡನೆ ಜಿದ್ದಾ ಅಂತಾರಾಷ್ಟ್ರೀಯ ಪುಸ್ತಕ ಮೇಳವನ್ನು ಉದ್ಘಾಟಿಸಿದರು.
ಜಿದ್ದಾ ಆಡಳಿತಗಾರ ರಾಜಕುಮಾರ ಮಿಶಾಲ್ ಬಿನ್ ಮಜೀದ್, ಸಂಸ್ಕೃತಿ ಮತ್ತು ವಾರ್ತಾ ಸಚಿವ ಆದಿಲ್ ಅಲ್-ತೊರೈಫಿ ಹಾಗೂ ಹಲವಾರ ರಾಜಕುಮಾರರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.
ಪುಸ್ತಕ ಮೇಳದಲ್ಲಿ ಸ್ಥಳೀಯ, ಜಿಸಿಸಿ, ಅರಬ್ ಮತ್ತು 30 ದೇಶಗಳ ಅಂತಾರಾಷ್ಟ್ರೀಯ ಪ್ರಕಾಶನ ಸಂಸ್ಥೆಗಳ 450 ಮಳಿಗೆಗಳಿವೆ.
ಪುಸ್ತಕ ಮೇಳವು ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ತೆರೆದಿರುತ್ತದೆ. ಪ್ರತಿನಿತ್ಯ 70,000 ಮಂದಿ ಮೇಳಕ್ಕೆ ಭೇಟಿ ನೀಡುವ ನಿರೀಕ್ಷೆಯನ್ನು ಸಂಘಟಕರು ಹೊಂದಿದ್ದಾರೆ.