ಸೌದಿ ಅರೇಬಿಯ: ಭಾರತೀಯನ ನಿಧನ
ಸಕಾಕ್ಕ,ಡಿ.19: ಕ್ಯಾಲಿಕಟ್ ನ ಫಾರೋಕ್ ಎಂಬಲ್ಲಿನ ರಝಾಕ್(58) ಸಕಾಕ್ಕ ಸೆಂಟ್ರಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆಂದು ವರದಿಯಾಗಿದೆ. ಅವರು ಅಸ್ತಮಾದಿಂದ ಬಳಲುತ್ತಿದ್ದರು. ನವೆಂಬರ್ 14ಕ್ಕೆ ರೋಗ ಉಲ್ಬಣಗೊಂಡ ಪರಿಣಾಮ ಆಸ್ಪತ್ರೆಗೆದಾಖಲಿಸಲಾಗಿತ್ತು. ಸೌದಿ ಅರೇಬಿಯಾದ ಸಕಾಕ್ಕದಲ್ಲಿ ಮಗನ ಜೊತೆ ವಾಸವಾಗಿದ್ದ ಅವರು ಊರಿಗೆ ಹೋಗಲು ಅಲ್‌ಜೌಫ್ ವಿಮಾನನಿಲ್ದಾಣದಲ್ಲಿ ಬೋರ್ಡಿಂಗ್ ಪಾಸ್ ತೆಗೆದು ವಿಮಾನವನ್ನು ಕಾದುಕುಳಿತ್ತಿದ್ದಾಗ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ನಂತರ ಅವರನ್ನು ವಿಮಾನನಿಲ್ದಾಣದ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಅನಾರೋಗ್ಯ ತೀರಾ ಉಲ್ಬಣಗೊಂಡದ್ದರಿಂದ ವೆಂಟಿಲೇಟರ್‌ಗೆ ಸ್ಥಾನಂತರಿಸಲಾಗಿತ್ತು. ಅದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ.
ಕಳೆದ 25ವರ್ಷಗಳಿಂದ ಅಲ್‌ಜೌಫದ ಗಾರಿ ಎಂಬಲ್ಲಿ ಅಂಗಡಿಯನ್ನು ಹೊಂದಿದ್ದರು. ಅವರ ಮೃತದೇಹ ಸಕ್ಕಾಕ ಸೆಂಟ್ರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ ಎಂದು ವರದಿ ತಿಳಿಸಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.