×
Ad

ದುಬೈಯಲ್ಲಿ ಡಿಕೆಎಸ್‌ಸಿ ಮೀಲಾದ್ ಸಂಭ್ರಮ

Update: 2016-12-21 17:44 IST

ದುಬೈ, ಡಿ.21: ನಮ್ಮ ಸುತ್ತ ಮುತ್ತಲಿನ ಪರಿಸರದ ಜನರು ಅನುಭವಿಸುತ್ತಿರುವ ನೋವು, ಕಣ್ಣೀರಿನ ಬಗ್ಗೆ ನಾವು ಚಿಂತನೆ ನಡೆಸಬೇಕು. ಅವರ ಕಣ್ಣೀರನ್ನು ಒರೆಸಲು ನಮ್ಮಿಂದಾಗುವ ಸಹಾಯ ಮಾಡಬೇಕಿದೆ ಎಂದು ಕುಂಬೋಳ್ ಅಹ್ಮದ್ ಮುಖ್ತಾರ್ ತಂಙಳ್ ಹೇಳಿದರು. ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್(ಡಿಕೆಎಸ್‌ಸಿ) ಯುಎಇ ಸಮಿತಿ ದುಬೈಯಲ್ಲಿ ಆಯೋಜಿಸಿದ್ದ ಮೀಲಾದ್ ಸಮಾವೇಶದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಕೆ.ಎಚ್.ಅಹ್ಮ ಫೈಝಿ ಕಕ್ಕಿಂಜೆ ಕಾರ್ಯಕ್ರಮ ಉದ್ಘಾಟಿಸಿದರು. ಮೀಲಾದ್ ಸಮಿತಿಯ ಅಧ್ಯಕ್ಷ ಶಕೂರು ಮನಿಲಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಭಾಷಣ ಮಾಡಿದ ಡಿಕೆಎಸ್‌ಸಿ ಯುಎಇ ಸಮಿತಿಯ ಸಲಹೆಗಾರ ಇಬ್ರಾಹೀಂ ಸಖಾಫಿ ಕೆದುಂಬಾಡಿ, ಪ್ರವಾದಿ ಮುಹಮ್ಮದ್ (ಸ.) ಅವರ ಜೀವನ ಕ್ರಮವನ್ನು ಅನುಸರಿಸುವಂತೆ ಕರೆ ನೀಡಿದರು.
 ಗ್ರಾಂಡ್ ಕರಾವಳಿ ಫ್ಯಾಮಿಲಿ ಮುಲಾಕಾತ್ ಸಂಚಾಲಕ ಎಸ್.ಯೂಸುಫ್ ಜನವರಿ 1ರಂದು ನಡೆಯುವ ಗ್ರಾಂಡ್ ಕರಾವಳಿ ಫ್ಯಾಮಿಲಿ ಮುಲಾಕಾತ್ ಕಾರ್ಯಕ್ರಮದ ವಿವರಗಳನ್ನು ನೀಡಿ, ಯಶಸ್ವಿಗೆ ಸಹಕರಿಸುವಂತೆ ಕೋರಿದರು.
  ಇದೇ ಸಂದರ್ಭ ಕುಂಬೋಳ್ ಅಹ್ಮದ್ ಮುಖ್ತಾರ್ ತಂಙಳ್‌ರನ್ನು ಡಿಕೆಎಸ್‌ಸಿ ಉಪಾಧ್ಯಕ್ಷ ಎಂ.ಇ.ಮೂಳೂರು, ಮೀಲಾದ್ ಸಮಿತಿಯ ಅಧ್ಯಕ್ಷ ಶಕೂರು ಮನಿಲಾ, ಇ.ಕೆ.ಇಬ್ರಾಹೀಂ ಕಿನ್ಯರವರು ಶಾಲುಹೊದಿಸಿ ಸನ್ಮಾನಿಸಿದರು. ಡಿಕೆಎಸ್‌ಸಿ ಯುಎಇ ಸಮಿತಿಯ ಸಲಹೆಗಾರರಾದ ಮೊಯ್ದಿನ್ ಕುಟ್ಟಿ ಹಾಜಿ ಕಕ್ಕಿಂಜೆ, ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕನ್ನಂಗಾರ್, ಫ್ಯಾಮಿಲಿ ಮುಲಾಕಾತ್ ಅಧ್ಯಕ್ಷ ಅಬ್ದುಲ್ ಲತೀಫ್ ಮುಲ್ಕಿ ಸ್ಮರಣಿಕೆ ನೀಡಿ ಗೌರವಿಸಿದರು.
 ಡಿಕೆಎಸ್‌ಸಿ ಸೆಂಟ್ರಲ್ ಕಮಿಟಿ ಹೊರತಂದ ‘ಹಸನಾತ್’ ಅನ್ನು ಡಿಕೆಎಸ್‌ಸಿ ಶಾರ್ಜಾ ಯುನಿಟ್ ಅಧ್ಯಕ್ಷ ಬಶೀರ್ ಕಾಪಿಕ್ಕಾಡ್, ಬಾರ್ ದುಬೈ ಯುನಿಟ್ ಅಧ್ಯಕ್ಷ ಇಸ್ಮಾಯೀಲ್ ಬಾಬಾ ಮೂಳೂರು, ಅಲ್ ಗ್ವಿಸಸ್ ಯುನಿಟ್ ಅಧ್ಯಕ್ಷ ಬದ್ರುದ್ದೀನ್‌ಅರಂತೋಡು, ಮದಾಮ್ ಯುನಿಟ್‌ನ ಹಾಜಿ ಅಬ್ದುಲ್ ಖಾದರ್ ಉಚ್ಚಿಲ, ರಾಸ್‌ಅಲ್ ಖೈಮಾ ಯುನಿಟ್ ಪ್ರಧಾನ ಕಾರ್ಯದರ್ಶಿ ಅಫ್ಝಲ್ ಮಂಗಳೂರು ಅವರಿಗೆ ನೀಡುವುದರ ಮೂಲಕ ಬಿಡುಗಡೆಗೊಳಿಸಲಾಯಿತು.
   ಕಾರ್ಯಕ್ರಮದಲ್ಲಿ ಡಿಕೆಎಸ್‌ಸಿ ಯುಎಇ ಸಮಿತಿಯ ಗೌರವಾಧ್ಯಕ್ಷ ಸೈಯದ್ ತ್ವಾಹ ಭಾಪಕಿ ತಂಙಳ್, ಸಲಹೆಗಾರರಾದ ಅಸ್ಗರ್ ಅಲಿ ತಂಙಳ್ ಕೋಲ್ಪೆ, ಮೊಯ್ದಿನ್ ಕುಟ್ಟಿ ಹಾಜಿ ಕಕ್ಕಿಂಜೆ, ಡಿಕೆಎಸ್‌ಸಿ ಉಪಾಧ್ಯಕ್ಷ ಎಂ.ಇ.ಮೂಳೂರು, ಡಿಕೆಎಸ್‌ಸಿ ಯುಎಇ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕನ್ನಂಗಾರ್, ಅಬೂಬಕರ್ ಮುಸ್ಲಿಯಾರ್ ಕೊಡುಂಗಾಯಿ, ಬಿಸಿಎಫ್ ಪ್ರಧಾನ ಕಾರ್ಯದರ್ಶಿ ಡಾ.ಕಾಪು ಮುಹಮ್ಮದ್, ಫ್ಯಾಮಿಲಿ ಮುಲಾಕಾತ್ ಅಧ್ಯಕ್ಷ ಲತೀಫ್ ಮುಲ್ಕಿ, ಮೀಲಾದ್ ಸಮಿತಿಯ ಕೋಶಾಧಿಕಾರಿ ಝೈನುದ್ದೀನ್ ಬೆಳ್ಳಾರೆ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಬ್ದುಲ್ ರಹಿಮಾನ್ ಹಾಜಿ ಸೆಂಟ್ಯಾರ್, ಅಬ್ದುಲ್ಲಾ ಉಸ್ತಾದ್, ಶಾಫಿ ಸಖಾಫಿ ಉಸ್ತುವಾರಿಯಲ್ಲಿ ವೌಲೀದ್ ಪಾರಾಯಣ ನೆರವೇರಿತು. ಕೆಸಿಎಫ್ ದುಬೈ ರೆನ್ ತಂಡದಿಂದ ಬುರ್ದಾ ಆಲಾಪನೆ ನಡೆಯಿತು. ಸಮದ್ ಕೊಳ್ನಾಡು ಉಸ್ತುವಾರಿಯಲ್ಲಿ ಡಿಕೆಎಸ್‌ಸಿ ಅಜ್ಮಾನ್ ಯುನಿಟ್ ಸದಸ್ಯರು ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿದರು. ಶರೀಫ್ ಆರ್ಲಪದವು, ಝುಬೈರ್ ಆತೂರು, ರಫೀಖ್ ಸಂಪ್ಯ, ಕಮರುದ್ದೀನ್ ಗುರುಪುರ ಮೊದಲಾದವರು ವಾಹನ ನಿಲುಗಡೆ ವ್ಯವಸ್ಥೆಯ ಜವಾಬ್ದಾರಿ ವಹಿಸಿಕೊಂಡಿದ್ದರು.

ಇ.ಕೆ.ಇಬ್ರಾಹೀಂ, ಇಸ್ಮಾಯೀಲ್ ಬರೂದ್, ಹಂಝ ಮೂಳೂರು, ಇಸ್ಮಾಯೀಲ್ ಬಾಬಾ ಮೂಳೂರು, ಬದ್ರುದ್ದೀನ್ ಅರಂತೋಡು, ಅಶ್ರಫ್ ಸತ್ತಿಕಲ್, ರಹಿಮಾನ್‌ಸಜಿಪ ಮೊದಲಾದವರು ಯಶಸ್ವಿಗೆ ಸಹಕರಿಸಿದರು. ಮೀಲಾದ್ ಸಮಿತಿಯ ಸಂಚಾಲಕ ಸೈಫುದ್ದೀನ್ ಪಟೇಲ್ ಅರಂತೋಡು ಸ್ವಾಗತಿಸಿದರು. ಎಸ್.ಎಂ.ಉಮರ್ ಸುಳ್ಯ ಹಾಗೂ ಮೀಲಾದ್ ಸಮಿತಿಯ ಮಾಧ್ಯಮ ಸಂಯೋಜಕ ಕಮಾಲ್ ಅಜ್ಜಾವರ ಕಾರ್ಯಕ್ರಮ ನಿರೂಪಿಸಿದರು. ಮೀಲಾದ್ ಪ್ರಚಾರ ಸಮಿತಿಯ ಸಂಚಾಲಕ ನವಾಝ್ ಕೋಟೆಕಾರ್ ವಂದಿಸಿದರು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ಇಸುಬು ಆರ್ಲಪದವು

contributor

Editor - ಇಸುಬು ಆರ್ಲಪದವು

contributor

Similar News