×
Ad

ಖಾಸಗಿ ಕ್ಷೇತ್ರದ ಎಲ್ಲ ಬಾಕಿ 2 ತಿಂಗಳಲ್ಲಿ ಚುಕ್ತಾ: ಸೌದಿ ಹಣಕಾಸು ಸಚಿವ

Update: 2016-12-24 22:38 IST

ಜಿದ್ದಾ, ಡಿ. 24: ಖಾಸಗಿ ಕ್ಷೇತ್ರಕ್ಕೆ ನೀಡಬೇಕಿರುವ ಎಲ್ಲ ಬಾಕಿಗಳನ್ನು ಎರಡು ತಿಂಗಳಲ್ಲಿ ಪಾವತಿಸುವುದಾಗಿ ಸೌದಿ ಅರೇಬಿಯ ಹೇಳಿದೆ.
ತೈಲ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಕೊಲ್ಲಿ ದೇಶಗಳಲ್ಲಿ ಕಾಣಿಸಿಕೊಂಡಿದ್ದ ಆರ್ಥಿಕ ಹಿನ್ನಡೆಯ ಹಿನ್ನೆಲೆಯಲ್ಲಿ ಹಲವು ಕಂಪೆನಿಗಳು ನೌಕರರನ್ನು ಕೆಲಸದಿಂದ ತೆಗೆದು ಹಾಕಿರುವುದನ್ನು ಸ್ಮರಿಸಬಹುದಾಗಿದೆ.

2014ರ ಮಧ್ಯಭಾಗದಿಂದ ತೈಲ ಬೆಲೆ ಕುಸಿಯಲು ಆರಂಭಿಸಿತ್ತು. ಈ ಹಿನ್ನೆಲೆಯಲ್ಲಿ ಸರಕಾರವು ಯೋಜನೆಗಳು ಮತ್ತು ಕಾರ್ಯಕ್ರಮಗಳ ಸಂಖ್ಯೆಯಲ್ಲಿ ಕಡಿತ ಘೋಷಿಸಿತ್ತು ಹಾಗೂ ಕೆಲವು ಖಾಸಗಿ ಕಂಪೆನಿಗಳಿಗೆ ಹಣ ಪಾವತಿಸುವುದನ್ನು ವಿಳಂಬಿಸಿತ್ತು.
ಆದರೆ, ಬಾಕಿಯಾಗಿರುವ ಪಾವತಿಗಳನ್ನು ಚುಕ್ತಾಗೊಳಿಸಲು ಸರಕಾರ ಈಗ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಸೌದಿ ಹಣಕಾಸು ಸಚಿವ ಮುಹಮ್ಮದ್ ಅಲ್-ಜದಾನ್ ರಿಯಾದ್‌ನಲ್ಲಿ ಗುರುವಾರ ಸುದ್ದಿಗಾರರಿಗೆ ಹೇಳಿದರು.

ಖಾಸಗಿ ಕ್ಷೇತ್ರಕ್ಕೆ ನೀಡಬೇಕಾಗಿದ್ದ ಎಲ್ಲ ಬಾಕಿಗಳನ್ನು ಡಿಸೆಂಬರ್ ಆರಂಭದ ವೇಳೆಗೆ ಚುಕ್ತಾಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದರು. ಕಳೆದ ಮೂರು ವಾರಗಳಲ್ಲಿ ಸಲ್ಲಿಸಲಾಗಿರುವ ಎಲ್ಲ ಬಿಲ್ಲುಗಳನ್ನು ಇನ್ನು ಎರಡು ತಿಂಗಳಲ್ಲಿ ಚುಕ್ತಾಗೊಳಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News