×
Ad

ಕತರ್: ಕ್ರೈಸ್ತ ಸಮುದಾಯದಿಂದ ಸಂಭ್ರಮದ ಕ್ರಿಸ್‌ಮಸ್

Update: 2016-12-28 14:57 IST

ದೋಹ,ಡಿ.28: ಕತರ್‌ನಲ್ಲಿ ಬಾಲಯೇಸು ಜಮ್ಮನದಿನಾಚರಣೆ ಅನಿವಾಸಿ ಕ್ರೈಸ್ತ ವಿಶ್ವಾಸಿಗಳು ಸಂತಸದಿಂದ ಆಚರಿಸಿದ್ದಾರೆ. ಮನೆಗಳಲ್ಲಿ ಔತಣ, ಆರಾಧಾನಾಲಯಗಳಲ್ಲಿ ವಿಶೇಷ ಪೂಜೆ ನಡೆಸಿದರು. ಅಬೂಹಮೂರ್ ವಿವಿಧ ಚರ್ಚ್‌ಗಳಲ್ಲಿ ವಿಶೇಷ ಕ್ರಿಸ್‌ಮಸ್ ಪ್ರಾರ್ಥನೆ ಜರಗಿತು. ಅವರ್ ಲೇಡಿ ಆಫ್ ರೋಸರಿ ಚರ್ಚ್‌ನಲ್ಲಿ ವಿವಿಧ ಭಾಷೆಗಳಲ್ಲಿ ಕ್ರಿಸ್ಮಸ್ ಸಂದೇಶ ನೀಡಲಾಯಿತು. ಇಟಲಿ, ಸ್ಪಾನಿಶ್, ಅರಬಿಕ್, ಫ್ರೆಂಚ್, ತಮಿಳು ಮುಂತಾದ ಭಾಷೆಗಳಲ್ಲಿ ಕಾರ್ಯಕ್ರಮವಿತ್ತು. ಕತರ್‌ನ ಭಾರತೀಯರು ಮಲಂಕರ ಆರ್ಥೋಡಕ್ಸ್ ಚರ್ಚ್, ದೋಹ ಇಮಾನ್ಯವೇಲ್ ಚರ್ಚ್, ಸೈಂಟ್ ಥಾಮಸ್ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ರಿಲೀಜಿಯಸ್ ಕಾಂಪ್ಲೆಕ್ಸ್ ರೋಸರಿ ಚರ್ಚ್‌ನ ಸುಮಾರು ಹದಿನೈದು ಅಡಿ ಎತ್ತರದ ’ಕ್ರಿಸ್‌ಮಸ್ ಟ್ರಿ’ ಆಕರ್ಷಣೀಯವಾಗಿತ್ತುಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News