ದುಬೈ ಶಾಪಿಂಗ್ ಫೆಸ್ಟ್ ಆರಂಭ
ದುಬೈ,ಡಿ.28: ಪ್ರವಾಸ, ವ್ಯಾಪಾರಿ ವಿಸ್ಮಯವಾದ ಡಿ.ಎಸ್. ಎಫ್ ಎಂದು ಕರೆಯಲಾಗುವ ದುಬೈ ಶಾಪಿಂಗ್ ಫೆಸ್ಟಿವಲ್ ದುಬೈಯಲ್ಲಿ ಆರಂಭವಾಗಿದೆ. ಗಲ್ಫ್‌ನ ಈ ದೊಡ್ಡ ವ್ಯಾಪಾರ, ಪ್ರವಾಸ ಉತ್ಸವ, 34 ದಿವಸ ನಡೆಯಲಿದ್ದು ಜನವರಿ 28ಕ್ಕೆ ಮುಕ್ತಾಯಗೊಳ್ಳಲಿದೆ. ವೈವಿಧ್ಯ ಕಲಾ-ಸಾಂಸ್ಕೃತಿಕ ಕಾರ್ಯಕ್ರಮಗಳು, ಬಹುಮಾನ ಯೋಜನೆಗಳು, ರಿಯಾಯಿತಿಗಳು, ಕೊಡುಗೆಗಳು ಶಾಫಿಂಗ್ ಫೆಸ್ಟ್‌ನಲ್ಲಿ ಇರಲಿದೆ. ಈ ಸಲದ ಶಾಪಿಂಗ್ ಫೆಸ್ಟ್‌ಗಿಂತ ಮೊದಲು ಸರಕಾರ ನಾಲ್ಕು ಹೊಸ ಪ್ರವಾಸಿ ಕೇಂದ್ರಗಳನ್ನು ಪರಿಚಯಿಸಿದೆ. ದುಬೈ ನಗರ ಈಗ ಸಂದರ್ಶಕರನ್ನು ಆಕರ್ಷಿಸುತ್ತಿದೆ.
ದುಬೈನಲ್ಲಿ 23ಕ್ಕೂ ಹೆಚ್ಚು ಶಾಪಿಂಗ್ ಮಾಲ್‌ಗಳಿದ್ದು, ಇವುಗಳು ಶೇ.50ರಿಂದ ಶೇ.70ರಷ್ಟು ದರಕಡಿತ ಮಾರಾಟವನ್ನು ಘೋಷಿಸಿದೆ. ನಗರದ ಮುಖ್ಯರಸ್ತೆಗಳು ಸೇತುವೆಗಳು ಹಾಗೂ ಕಟ್ಟಡಗಳನ್ನು ಅಲಂಕರಿಸಲಾಗಿದೆ. ದುಬೈ ವಾಟರ್ ಕೆನಾಲ್ ಅಲಂಕೃತಗೊಂಡಿವೆ. ಕಲಾ-ಸಾಂಸ್ಕೃತಿಕ ಕೇಂದ್ರ ದುಬೈ ಆಪೇರಾ ಹೌಸ್, ಜಗತ್ತಿನ ಅತಿದೊಡ್ಡ ಥೀಂ ಪಾರ್ಕ್ ಐಎಂಜಿ ವರ್ಲ್ಡ್ ಆಫ್ ಅಡ್ವೆಂಚರ್ಸ್, ದುಬೈಪಾರ್ಕ್ಸ್ ಆಂಡ್ ರಿಸಾರ್ಟ್‌ಸ್ ಫೆಸ್ಟ್‌ನಲ್ಲಿ ಭಾಗವಹಿಸುವವರನ್ನು ಸ್ವಾಗತಿಸುತ್ತಿವೆ ಎಂದು ವರದಿ ತಿಳಿಸಿದೆ.