ದಮ್ಮಾಮ್‌ನಲ್ಲಿ 60,000 ಲೀ.ಮದ್ಯ ಪತ್ತೆ:ನಾಲ್ವರು ನೇಪಾಳಿ, ಓರ್ವ ಭಾರತೀಯನ ಬಂಧನ
Update: 2016-12-29 17:12 IST
ದಮ್ಮಾಮ್,ಡಿ.29: ದಮ್ಮಾಮ್‌ನಲ್ಲಿ ಭಾರೀ ಮದ್ಯ ಸಂಗ್ರಹವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ನಾಲ್ವರು ನೇಪಾಳಿಯರು, ಒಬ್ಬ ಭಾರತೀಯನನ್ನು ಬಂಧಿಸಲಾಗಿದೆ. ಸ್ಥಳದಲ್ಲಿ ತಯಾರಿಸಿ ವಿತರಣೆಗೆ 60,000 ಲೀ. ಮದ್ಯವನ್ನು ಸಂಗ್ರಹಿಸಿಡಲಾಗಿತ್ತು ಎಂದುಪೊಲೀಸರುತಿಳಿಸಿದ್ದಾರೆ.
ಪ್ಲಾಸ್ಟಿಕ್ ಟ್ಯಾಂಕ್‌ಗಳಲ್ಲಿ ಮದ್ಯವನ್ನು ಇರಿಸಲಾಗಿತ್ತು. ಪೂರ್ವ ಪ್ರಾಂತದಲ್ಲಿ ಮೊದಲ ಭಾರೀ ಇಷ್ಟು ಹೆಚ್ಚು ಪ್ರಮಾಣದಲ್ಲಿ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಶೇಷ ಪೊಲೀಸರ ತಂಡ ಮಿಂಚಿನ ದಾಳಿನಡೆಸಿ ಮದ್ಯವನ್ನು ವಶಪಡಿಸಿಕೊಂಡಿದೆ. ಪ್ರದೇಶದ ಕೃಷಿಸ್ಥಳಕ್ಕೆ ಸಮೀಪ ಅತ್ಯಾಧುನಿಕ ವ್ಯವಸ್ಥೆಯನ್ನು ಅಳವಡಿಸಿಕೊಂಡು ಮದ್ಯ ತಯಾರಿಸಲಾಗುತ್ತಿತ್ತು. ತಯಾರಿಗೆ ಬಳಸುವ ವಿವಿಧ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿಸಲಾದ ವ್ಯಕ್ತಿಗಳನ್ನು ಮುಂದಿನಕ್ರಮಕ್ಕಾಗಿ ಸಂಬಂಧಿಸಿದ ಇಲಾಖೆಗೆ ಪೊಲೀಸರು ಒಪ್ಪಿಸಿದ್ದಾರೆಂದು ವರದಿ ತಿಳಿಸಿದೆ.