ಸೌದಿ: 15 ಸ್ಮಾರಕಗಳು ನಗರ ಪರಂಪರೆ ತಾಣಗಳ ಪಟ್ಟಿಗೆ
ರಿಯಾದ್, ಜ. 4: ರಾಷ್ಟ್ರೀಯ ನಗರ ಪರಂಪರೆ ದಾಖಲೆಗೆ ಸೇರಿಸಲು 15 ನಗರ ಪರಂಪರೆ ತಾಣಗಳ ಮೊದಲ ಪಟ್ಟಿಗೆ ಸೌದಿ ಪ್ರವಾಸೋದ್ಯಮ ಮತ್ತು ರಾಷ್ಟ್ರೀಯ ಪರಂಪರೆ ಆಯೋಗದ ಅಧ್ಯಕ್ಷ ರಾಜಕುಮಾರ ಸುಲ್ತಾನ್ ಬಿನ್ ಸಲ್ಮಾನ್ ಅನುಮೋದನೆ ನೀಡಿದ್ದಾರೆ.
ನಗರ ಪರಂಪರೆ ತಾಣಗಳನ್ನು ದಾಖಲಿಸುವ, ಸಂರಕ್ಷಿಸುವ ಹಾಗೂ ದಾಖಲೀಕರಿಸುವ ಉದ್ದೇಶವನ್ನು ಆಯೋಗ ಹೊಂದಿದೆ.
ಮೊದಲ ಪಟ್ಟಿಯಲ್ಲಿ ಅನುಮೋದನೆ ಪಡೆದ ನಗರ ಪಾರಂಪರಿಕ ತಾಣಗಳ ವಿವರ ಇಂತಿದೆ:
ರಿಯಾದ್‌ನ ಬಡಿಯಾದಲ್ಲಿರುವ ಅಲ್-ಮಸ್ಮಾಕ್ ಅರಮನೆ, ಅಲ್ ಮುರಬ್ಬ ಅರಮನೆ, ಅಲ್-ಅಹ್ಮರ್ ಅರಮನೆ, ಶಗ್ರಾಹ್‌ನಲ್ಲಿರುವ ಅಲ್-ಸುಬೈ ಹೌಸ್, ಮಕ್ಕಾದಲ್ಲಿರುವ ಅಲ್ ಸಖಾಫ್ ಅರಮನೆ, ಮದೀನಾ ರೈಲ್ವಿ ನಿಲ್ದಾಣ, ಜಿದ್ದಾದಲ್ಲಿರುವ ಅಲ್-ಖೋಝಮ್ ಅರಮನೆ, ತೈಫ್‌ನಲ್ಲಿರುವ ಶುಬ್ರಾಹ್ ಅರಮನೆ, ಅಭದಲ್ಲಿರುವ ಶಾಝ ಅರಮನೆ, ಅಲ್ ಉಗೈರ್‌ನಲ್ಲಿರುವ ಐತಿಹಾಸಿಕ ಬಂದರು ಕಟ್ಟಡಗಳು, ಅಲ್-ಅಹ್ಸದಲ್ಲಿರುವ ಇಬ್ರಾಹೀಮ್ ಅರಮನೆ, ಅಲ್-ಖೋಝಮ್ ಅರಮನೆ, ಫುರ್ಸಾನ್ ದ್ವೀಪದಲ್ಲಿರುವ ಅಲ್ ರಿಫೈ ಮನೆಗಳು ಮತ್ತು ಅಲ್ ಜೌಫ್‌ನಲ್ಲಿರುವ ಕಾಫ್ ಅರಮನೆ.
ಪುರಾತನ ವಸ್ತುಗಳು, ಸಂಗ್ರಹಾಲಯಗಳು ಮತ್ತು ನಗರ ಪರಂಪರೆ ನಿಯಂತ್ರಣ ಕಾಯ್ದೆಯ 45ನೆ ವಿಧಿಯನ್ವಯ ಈ ತಾಣಗಳನ್ನು ರಾಷ್ಟ್ರೀಯ ದಾಖಲೆಗೆ ಸೇರಿಸಲಾಗಿದೆ ಎಂದು ಆಯೋಗವು ಮಂಗಳವಾರ ತಿಳಿಸಿದೆ.