ಜಿದ್ದಾ: ಫೆ. 22, 23ರಂದು 6ನೆ ಕೊಲ್ಲಿ ಶಿಕ್ಷಣ ಸಮ್ಮೇಳನ
ಜಿದ್ದಾ (ಸೌದಿ ಅರೇಬಿಯ), ಜ. 9: ಆರನೆ ಕೊಲ್ಲಿ ಶಿಕ್ಷಣ ಸಮ್ಮೇಳನ ಮತ್ತು ಪ್ರದರ್ಶನ ಜಿದ್ದಾದ ವ್ಯಾಪಾರ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದಲ್ಲಿ ಫೆಬ್ರವರಿ 22 ಮತ್ತು 23ರಂದು ನಡೆಯಲಿದೆ.
ಕೊಲ್ಲಿ ಸಹಕಾರ ಮಂಡಳಿ (ಜಿಸಿಸಿ)ಯ ಮಹಾಕಾರ್ಯದರ್ಶಿ ಅಬ್ದುಲ್ಲತೀಫ್ ಅಲ್-ಝಯಾನಿ ಮತ್ತು ಶಿಕ್ಷಣ ಕ್ಷೇತ್ರದ ಪರಿಣತರು ಮತ್ತು ಅಧಿಕಾರಿಗಳು ಹಾಗೂ ಖಾಸಗಿ ಕ್ಷೇತ್ರದ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
ಜಿಸಿಸಿಯ ವಿದ್ಯಾರ್ಥಿಗಳ ಸಂಖ್ಯೆ ವಾರ್ಷಿಕವಾಗಿ 1.8 ಶೇಕಡ ದರದಲ್ಲಿ ವೃದ್ಧಿಯಾಗುತ್ತಿದ್ದು, 2020ರ ವೇಳೆಗೆ ಅದು 1.13 ಕೋಟಿ ತಲುಪಲಿದೆ ಎಂದು ಫೆಡರೇಶನ್ ಆಫ್ ಜಿಸಿಸಿ ಚೇಂಬರ್ಸ್‌ನ ಮಹಾಕಾರ್ಯದರ್ಶಿ ಅಬ್ದುಲ್ರಹೀಮ್ ಹಸನ್ ನಖಿ ತಿಳಿಸಿದರು.
ಎರಡು ದಿನಗಳ ಸಮ್ಮೇಳನದಲ್ಲಿ 200 ಕೊಲ್ಲಿ ಶಿಕ್ಷಣ ತಜ್ಞರು ಮತ್ತು ಪರಿಣತರು ಹಾಗೂ 60 ಅಂತಾರಾಷ್ಟ್ರೀಯ ಪರಿಣತರು ಪಾಲ್ಗೊಳ್ಳಲಿದ್ದಾರೆ ಎಂದು ವ್ಯಾಪಾರ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ ನಿರ್ದೇಶಕ ಹುಸೈನ್ ಅಲಾವಿ ಹೇಳಿದರು.