ಕಿಂಗ್ ಫೈಸಲ್ ಪ್ರಶಸ್ತಿಗೆ ಸೌದಿ ದೊರೆ ಸಲ್ಮಾನ್ ಆಯ್ಕೆ

Update: 2017-01-11 11:17 GMT

ರಿಯಾದ್,ಜ 11: ಕಿಂಗ್ ಫೈಸಲ್ ಪ್ರಶಸ್ತಿಗೆ ಈ ಸಲ ಸೌದಿ ಅರೇಬಿಯದ ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಝೀಝ್ ಆಯ್ಕೆಯಾಗಿದ್ದಾರೆ. ಮಕ್ಕ ಮದೀನ ಎರಡು ಪವಿತ್ರ ಮಸೀದಿಗಳ ಮೇಲ್ವಿಚಾರಕ ಹಾಗೂ ಅಲ್ಲಿನ ಸೇವೆಗಾಗಿಹಾಗೂ ಅರಬ್ ಮುಸ್ಲಿಮರ ನಡುವೆ ಒಗ್ಗಟ್ಟಿಗೆ ಶ್ರಮಿಸಿದ್ದಕ್ಕಾಗಿ ಈ ಪ್ರಶಸ್ತಿಗೆ ಅವರು ಆಯ್ಕೆಯಾಗಿದ್ದಾರೆ.

ಮಂಗಳವಾರ ರಿಯಾದ್ ಫೈಸಲಿಯ ಸೆಂಟರ್‌ನ ಅಲ್‌ಕುಸಾಮ ಹೊಟೇಲ್‌ನಲ್ಲಿ ಪ್ರಶಸ್ತಿಸಮಿತಿ ಮುಖ್ಯಸ್ಥ ಹಾಗೂ ಮಕ್ಕ ಗವರ್ನರ್ ಅಮೀರ್ ಖಾಲಿದ್ ಅಲ್ ಫೈಝಲ್ ಸೌದಿ ದೊರೆಗೆ ಪ್ರಶಸ್ತಿಯನ್ನು ಘೋಷಿಸಿದ್ದಾರೆ. ವೈದ್ಯಕೀಯ ಕ್ಷೇತ್ರದ ಪ್ರಶಸ್ತಿಗೆ ಜಪಾನ್‌ನ ತದಮಿಸ್ತುಸ್ ಕಿಸಿಮೊಟೊ ಆಯ್ಕೆ ಯಾಗಿದ್ದಾರೆ. ವಿಜ್ಞಾನದಲ್ಲಿ ಸ್ವಿಟ್ಝರ್‌ಲೆಂಡ್ ಪ್ರೋ. ಡ್ಯಾನಿಯಲ್ ಹಾಗೂ ನೆದರ್‌ಲೇಂಡ್‌ನ ಪ್ರೊ. ಲಾರೆನ್ಸ್ ಜಂಟಿಯಾಗಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅರಬಿ ಭಾಷೆಯ ಪ್ರಶಸ್ತಿ ಜೋರ್ಡಾನ್‌ನ ಅರಬಿ ಭಾಷೆ ಅಕಾಡಮಿಗೆ ಸಂದಿದೆ.

ವಿಜ್ಞಾನತಂತ್ರಜ್ಞಾನದ ಅರಬೀಕರಣದ ಕೊಡುಗೆಗಾಗಿ ಲೆಬನಾನ್‌ನ ರಿಝ್ವಾನ್ ಸೈಯದ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇಸ್ಲಾಮೀ ಸೇವೆ, ಅಧ್ಯಯನ, ಅರಬಿ ಭಾಷೆ. ವಿಜ್ಞಾನ , ವೈದ್ಯಕೀಯ ಈ ಐದು ವಿಭಾಗಗಳಲ್ಲಿ ಫೈಸಲ್ ಪ್ರಶಸ್ತಿ ವರ್ಷಂಪ್ರತಿ ನೀಡಲಾಗುತ್ತದೆ . ರಿಯಾದ್‌ನಲ್ಲಿ ಮುಂಬರುವ ತಿಂಗಳಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News