ಭಯೋತ್ಪಾದನೆ ನಿಗ್ರಹ: ಸೌದಿ ನೆರವು ಕೋರಿದ ಲೆಬನಾನ್

Update: 2017-01-11 17:41 GMT

ರಿಯಾದ್, ಜ. 11: ಭಯೋತ್ಪಾದನೆ ವಿರುದ್ಧ ಹೋರಾಡಲು ಲೆಬನಾನ್ ಸೌದಿ ಅರೇಬಿಯದ ನೆರವು ಕೋರಿದೆ.ಅಕ್ಟೋಬರ್‌ನಲ್ಲಿ ಲೆಬನಾನ್‌ನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ವಿದೇಶ ಪ್ರವಾಸ ಕೈಗೊಂಡು ಸೌದಿ ಅರೇಬಿಯಕ್ಕೆ ಆಗಮಿಸಿರುವ ಮೈಕಲ್ ಆವೊನ್ ಸೌದಿ ಅರೇಬಿಯದ ದೊರೆ ಸಲ್ಮಾನ್ ಜೊತೆಗೆ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.

‘‘ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ನಮಗೆ ಸೌದಿ ಅರೇಬಿಯ ಮತ್ತು ಇತರ ದೇಶಗಳ ಸಹಕಾರ ಬೇಕಾಗಿದೆ’’ ಎಂದು ‘ಅಲ್-ಅಖ್‌ಬರಿಯ ಟಿವಿ’ ಜೊತೆ ಮಾತನಾಡಿದ ಆವೊನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News