ಸೌದಿ ಅರೇಬಿಯ: ಅನಧಿಕೃತ ಹೌಸ್ ಡ್ರೈವರ್ ವೀಸಾ- 27ಮಂದಿ ಬಂಧನ
ದಮ್ಮಾಮ್,ಜ.17: ಹೌಸ್‌ಡ್ರೈವರ್ ವೀಸಾದಲ್ಲಿರುವವರು ಬೇರೆ ಕೆಲಸಕ್ಕೆ ಸೇರಲು ನೀಡಿದ ರಿಯಾಯಿತಿ ಸಮಯ ಕೊನೆಗೊಂಡ ಬಳಿಕವೂ ಅನಧಿಕೃತವಾಗಿ ಇಖಾಮ ಬದಲಿಸಿದ ಐವರು ಭಾರತೀಯರ ಸಹಿತ 27ಮಂದಿಯನ್ನು ಸೌದಿ ಪೊಲೀಸರು ಬಂಧಿಸಿದ್ದಾರೆ.
ಎಂಟುಸಾವಿರ ರಿಯಾಲ್ ನಿಂದ ಹತ್ತುಸಾವಿರ ರಿಯಾಲ್ ಕೊಟ್ಟು ಅನಧಿಕೃತ ವಿಧಾನದಲ್ಲಿ ಇವರು ಇಖಾಮ ಬದಲಿಸಿದ್ದರು. ತಮಿಳ್ನಾಡಿನ ದಿವಾಕರ ಎಂಬವರನ್ನು ಕಳೆದ ದಿವಸ ಲೇಬರ್ ಕಚೇರಿ ಅಧಿಕಾರಿಗಳು ಕೆಲಸದ ಸ್ಥಳದಿಂದ ಬಂಧಿಸಿದ್ದರು.ಆರು ತಿಂಗಳ ಹಿಂದೆ ಎಂಟು ಸಾವಿರ ರಿಯಾಲ್ ನೀಡಿ ಹೌಸ್‌ಡ್ರೈವರ್ ವೀಸಾದಿಂದ ಲೇಬರ್ ವೀಸಾಕ್ಕೆ ಇಖಾಮ ಬದಲಾಯಿಸಿದ್ದರು.
ಇವರ ಜೊತೆ ಮೂವರು ಹೈದರಾಬಾದ್‌ನ ವ್ಯಕ್ತಿಗಳನ್ನು ಬಂಧಿಸಲಾಗಿದೆ. ಜವಾಸತ್ ಮುಖೇನ ಇಖಾಮ ಬದಲಿಸಿದವರನ್ನು ಬಂಧಿಸಲಾಗಿದೆ. ಜವಾಸದದಲ್ಲಿ ಬದಲಿಸಿದ ವ್ಯಕ್ತಿಗಳ ವಿವರಗಳನ್ನು ಮಕ್ತಬುಲ್ ಅಮಲ್ (ಲೇಬರ್ ಕಚೇರಿ) ವ್ಯವಸ್ಥೆಗೆ ಬದಲಾಯಿಸದಿರುವುದು ಇವರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಕಾರ್ಮಿಕ ಸಚಿವಾಲಯದಲ್ಲಿ ಇಖಾಮ ಬದಲಾಯಿಸಿದ್ದರೆ ಈ ಸಮಸ್ಯೆಯಿರುತ್ತಿರಲಿಲ್ಲ ಎಂದು ವರದಿ ತಿಳಿಸಿದೆ.
ಪ್ರಥಮ ಹಂತದ ನಿತಾಕತ್ ಜಾರಿಗೆ ತಂದಾಯ ಮನೆ ಕೆಲಸಕ್ಕೆ ಸಂಬಂಧಿಸಿದ ಕಾರ್ಮಿಕರಿಗೆ ಬೇರೆ ಕೆಲಸಗಳಿಗೆ ಬದಲಾಯಿಸಿಕೊಳ್ಳಲು ಅನುಮತಿ ನೀಡಲಾಗಿತ್ತು. ಎರಡನೆ ಹಂತದ ನಿತಾಕತ್ ವೇಳೆ ಈ ಅನುಮತಿಯನ್ನು ತೆರವು ಗೊಳಿಸಲಾಗಿತ್ತು.ಆದರೆ, ರಿಯಾಯಿತಿ ಕಾಲಾವಧಿ ಮುಗಿದ ಬಳಿಕವೂ ಏಜೆಂಟ್‌ಗಳಿಗೆ ಹಣ ನೀಡಿ ಅನಧಿಕೃತವಾಗಿ ಕೆಲಸ ಬದಲಾಯಿಸುವುದು ಮುಂದುವರಿದಿತ್ತು. ನಿತಾಕತ್ ನಂತರ ಹಲವಾರು ಮಂದಿ ಮನೆಕೆಲಸಗಳಿಗಾಗಿ ಸೌದಿಗೆ ಬಂದಿದ್ದರು. ಈ ಸಂದರ್ಭವನ್ನು ಏಜೆಂಟ್‌ಗಳು ಹಣಮಾಡಲು ಬಳಸಿಕೊಂಡಿದ್ದಾರೆ. ಇಂತಹವರನ್ನೇ ಈಗ ಬಂಧಿಸಲಾಗಿದೆ ಎಂದು ವರದಿಯಾಗಿದೆ.