×
Ad

ಸೌದಿ ವಿದ್ಯಾರ್ಥಿ ವಿರುದ್ಧ ಅಮೆರಿಕದಲ್ಲಿ ಮತ್ತೆ ದಾಳಿ

Update: 2017-01-17 12:25 IST

ಜಿದ್ದ,ಜ.17: ಮತ್ತೊಬ್ಬ ಸೌದಿ ವಿದ್ಯಾರ್ಥಿಮೇಲೆ ಅಮೆರಿಕದಲ್ಲಿ ಪುನಃ ದಾಳಿಯಾಗಿದ್ದು, ಕಾರು ಚಲಾಯಿಸಿ ತೆರಳುತ್ತಿದ್ದಾಗ ಮುಹಮ್ಮದ್ ಝಿಯಾದ್ ಅಲ್ ಫದಿಲ್ ಎನ್ನುವ ವಿದ್ಯಾರ್ಥಿಗೆ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಲಾದ ಘಟನೆ ಕೆಂಟಕಿಯಲ್ಲಿ ನಡೆದಿದೆ.

ತೀವ್ರಹಲ್ಲೆಗೊಳಗಾದ ವಿದ್ಯಾರ್ಥಿ ತಲೆಗೆ ಗಾಯಗಾಯವಾಗಿದ್ದು  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವಿದ್ಯಾರ್ಥಿ ತಂದೆ ಡಾ. ಝಿಯಾದ್ ಹೇಳಿದ್ದಾರೆ. ಅಮೆರಿಕದಲ್ಲಿ ಜನಾಂಗೀಯ ದ್ವೇಷದ ಘಟನೆಗಳು ಅವ್ಯಾಹತವಾಗಿ ನಡೆಯುತ್ತಿದೆ. ಆದರೆ ತನ್ನ ಪುತ್ರನ ಹೊಸಕಾರನ್ನು ಕದಿಯಲು ಯತ್ನಿಸಲಾಯಿತೇ ಎಂಬ ಶಂಕೆಯೂ ಇದೆ ಎಂದು ಅವರು ಹೇಳಿದ್ದಾರೆ.

ಸೌದಿ ರಾಯಭಾರ ಕಚೇರಿ ಈ ವಿಷಯದಲ್ಲಿ ಮಧ್ಯಪ್ರವೇಶಿಸಿದೆ ಹಾಗೂ ಇದಕ್ಕಾಗಿ ವಿಶ್ವಸಂಸ್ಥೆಯಲ್ಲಿ ಸೌದಿಯ ಖಾಯಂ ಪ್ರತಿನಿಧಿಯಾದ ಅಬ್ದುಲ್ಲ ಬಿನ್‌ಯಹ್ಯಾ ಅಲ್ ಮುಐಲಿಮರಿಗೆ ಡಾ. ಝಿಯಾದ್ ಕೃತಜ್ಞತೆ ಸಲ್ಲಿಸಿದ್ದಾರೆ. ಅವರ ಪುತ್ರ ದಾಳಿಗೀಡಾದ ಮುಹಮ್ಮದ್ ಝಿಯಾದ್ ಫೈನಾನ್ಶಿಯಲ್ ಮ್ಯಾನೇಜ್‌ಮೆಂಟ್ ಪದವಿ ವಿದ್ಯಾರ್ಥಿಯಾಗಿದ್ದಾನೆ.

ಇತ್ತೀಚೆಗೆ ಅಮೆರಿಕದಲ್ಲಿ ಸೌದಿ ಪ್ರಜೆಗಳ ವಿರುದ್ಧ ದಾಳಿಗಳು ಹೆಚ್ಚುತ್ತಿವೆ. ಈ ಹಿಂದೆ ವಿಸ್ಕೋನ್ಸಿನ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದ ಹುಸೈನ್ ಸಈದ್‌ನನ್ನು ಥಳಿಸಿ ಕೊಂದಪ್ರಕರಣದಲ್ಲಿ ಕಲಾನ್ ಎಂ ಆಸ್ಬೆನ್ ಎಂಬ 27 ವರ್ಷದ ಯುವಕನನ್ನು ಇತ್ತೀಚೆಗೆ ಬಂಧಿಸಲಾಗಿದೆ.ಬುರೈದದ ಹುಸೈನ್ ಬಿಸಿನೆಸ್ ಅಡ್ಮಿಸ್ಟ್ರೇಶನ್ ಪದವಿ ವಿದ್ಯಾರ್ಥಿಯಾಗಿದ್ದ. ಅಕ್ಟೋಬರ್ 30ಕ್ಕೆ ಹುಸೈನ್‌ನನ್ನು ಮಾರಕವಾಗಿ ಥಳಿಸಲಾಗಿತ್ತು. ಮರುದಿವಸ ಆಸ್ಪತ್ರೆಯಲ್ಲಿ ಆತ ಅಸುನೀಗಿದ್ದ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News