ಬಹ್ರೈನ್: ಬಾಂಬು ಸ್ಫೋಟದ 3 ಅಪರಾಧಿಗಳಿಗೆ ಗಲ್ಲು ಜಾರಿ

Update: 2017-01-17 10:42 GMT

ಮನಾಮ, ಜ.17: ಬಹ್ರೈನ್‌ನಲ್ಲಿ ಯುಎಇ ಪ್ರಜೆ ಅಧಿಕಾರಿ ಸಹಿತ ಮೂವರು ಪೊಲೀಸರು ಬಾಂಬು ಸ್ಫೋಟ ದಲ್ಲಿ ಮೃತಪಟ್ಟ ಪ್ರಕರಣದ ಮೂವರು ಅಪರಾಧಿಗಳಿಗೆ ಗಲ್ಲುಶಿಕ್ಷೆ ಜಾರಿಗೊಳಿಸಲಾಗಿದೆ. ಬಹ್ರೈನ್‌ನ ಪ್ರಧಾನ ಕೋರ್ಟು ಮೂವರು ಆರೋಪಿಗಳ ಮೇಲ್ಮನವಿ ತಿರಸ್ಕರಿಸಿತ್ತು. ನಂತರ ಫಯರಿಂಗ್ ಸ್ಕ್ವಾಡ್‌ನ ನೇತೃತ್ವದಲ್ಲಿ ಶಿಕ್ಷೆ ಜಾರಿಗೊಳಿಸಲಾಯಿತು. ಜನವರಿ ಒಂಬತ್ತರಂದು ಕೋರ್ಟು ಅಲಿ ಅಬ್ದುಲ್ ಶಾಹಿದ್ ಸಿಂಗೇಯ್ಸಾ(20),ಸಾಮಿ ಮಿರ್ಝಾ ಮುಶೈಮ(41), ಅಬ್ಬಾಸ್ ಜಮೀಲ್ ತಾಹಿರ್ ಮುಹಮ್ಮದ್ ಸಮಿ ಸಲ್ಲಿಸಿದ ಮೇಲ್ಮನವಿ ತಿರಸ್ಕರಿಸಿ ಶಿಕ್ಷೆ ಖಾಯಂಗೊಳಿಸಿತ್ತು.

2014ರಲ್ಲಿ ದೇಯ್‌ಹಿ ಎಂಬಲ್ಲಿ ನಡೆದಿದ್ದ ಬಾಂಬ್ ಸ್ಫೋಟದಲ್ಲಿ ಯುಎಇ ಅಧಿಕಾರಿ ಫಸ್ಟ್‌ಲೆಫ್ಟಿನೆಂಟ್ ತಾರಿಖ್ ಅಲ್ ಶಾಹಿ(41), ಯಮನ್‌ನ ಅಮ್ಮಾರ್ ಅಬ್ದು ಅಲಿ ಮುಹಮ್ಮದ್(35), ಪಾಕಿಸ್ತಾನದ ಮುಹಮ್ಮದ್ ಅರ್ಝಾನ್ ರಮಝಾನ್(22) ಮೃತಪಟ್ಟಿದ್ದರು. ರಿಮೋಟ್ ಕಂಟ್ರೋಲ್ ಬಳಸಿ ಸ್ಫೋಟ ನಡೆಸಲಾಗಿತ್ತು. ಘಟನೆಯಲ್ಲಿ ಸ್ಥಳದಲ್ಲೆ ಮೂವರು ಮೃತಪಟ್ಟು , ಇನ್ನು ಏಳು ಮಂದಿ ಅಂದು ಗಾಯಗೊಂಡಿದ್ದರು. ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿಗೊಳಿಸುವ ವೇಳೆ ನ್ಯಾಯಾಧೀಶರು, ಪಬ್ಲಿಕ್ ಪ್ರಾಸಿಕ್ಯೂಷನ್ ಪ್ರತಿನಿಧಿಗಳು, ಜೈಲು ಕಮಾಂಡೆಂಟ್, ಪಿಜಿಶಿಯನ್, ಮತಪಂಡಿತರು ಉಪಸ್ಥಿತರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News