ಬಿಡಬ್ಲ್ಯೂಎಫ್ ವತಿಯಿಂದ ತುಂಬೆ ಮೊಯ್ದಿನ್ ರಿಗೆ ಸನ್ಮಾನ

Update: 2017-01-17 12:33 GMT

ಅಬುದಾಬಿ , ಜ.17 :  ‘ ಎನ್ ಡಿ ಟಿವಿ ಗಲ್ಫ್ ಇಂಡಿಯನ್ ಎಕ್ಸಲೆನ್ಸ್ ಅವಾರ್ಡ್ಸ್ 2016’ ಸಮಾರಂಭದಲ್ಲಿ ಎನ್ ಡಿ ಟಿವಿ ಯ ಪ್ರತಿಷ್ಠಿತ ‘ಗ್ಲೋಬಲ್ ಲೀಡರ್ ‘ ಅವಾರ್ಡ್ ಪಡೆದ  ಪ್ರತಿಷ್ಠಿತ  ತುಂಬೆ ಗ್ರೂಪ್ ನ ಸ್ಥಾಪಕ ಅಧ್ಯಕ್ಷರಾದ ತುಂಬೆ ಮೊಯ್ದಿನ್ ರವರನ್ನು ಬ್ಯಾರೀಸ್ ವೆಲ್ಫೇರ್ ಫೋರಂ ( ಬಿಡಬ್ಲ್ಯೂಎಫ್) ವತಿಯಿಂದ ಸನ್ಮಾನಿಸಲಾಯಿತು.

ಯುಎಇ ಮತ್ತು ಭಾರತದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ನೀಡಿದ ಅವರ ಅಪಾರ ಕೊಡುಗೆಗಾಗಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಸನ್ಮಾನ ಸ್ವೀಕರಿಸಿದ ಮಾತನಾಡಿದ ತುಂಬೆ ಮೊಯ್ದಿನ್ ರವರು  ಬಿಡಬ್ಲ್ಯೂಎಫ್ ಮಾಡುತ್ತಿರುವ ಸಾಮೂಹಿಕ ಮದುವೆ , ಶೌಚಾಲಯ ಯೋಜನೆ ಮುಂತಾದ  ಸಾಮಾಜಿಕ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು .

 ತುಂಬೆ ಮೊಯ್ದಿನ್  ಆರಂಭದಿಂದಲೂ ಬಿಡಬ್ಲ್ಯೂಎಫ್  ಈ ಎಲ್ಲಾ ಸಾಮಾಜಿಕ ಕಾರ್ಯಗಳನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ.

ಸನ್ಮಾನ ಕಾರ್ಯಕ್ರಮದಲ್ಲಿ ಬಿಡಬ್ಲ್ಯೂಎಫ್ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್, ಉಪಾಧ್ಯಕ್ಷರುಗಳಾದ ಹಂಝ ಖಾದರ್ , ಮುಹಮ್ಮದ್ ರಫೀಕ್ ಕೃಷ್ಣಾಪುರ, ಲೆಕ್ಕ ಪರಿಶೋಧಕ ಅಬ್ದುಲ್ ಮಜೀದ್ , ಜೊತೆ ಕಾರ್ಯದರ್ಶಿ ಇಮ್ರಾನ್ ಅಹಮ್ಮದ್ ಕುದ್ರೋಳಿ , ಜಹೀರ್ ಹೈಕೋ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News