ಅಸ್ಸುಫ್ಪಾ ಪರೀಕ್ಷಾ ಫಲಿತಾಂಶ ಪ್ರಕಟ, ವಿದ್ಯಾರ್ಥಿಗಳ ಸಾಧನೆ

Update: 2017-01-18 06:10 GMT

ಸೌದಿ ಅರೇಬಿಯ, ಜ.18: ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್) ಸಂಘಟನೆಯು ಗಲ್ಫ್‌ನಲ್ಲಿರುವ ಅನಿವಾಸಿ ಮುಸ್ಲಿಮ್ ಕನ್ನಡಿಗರಿಗಾಗಿ ಹಮ್ಮಿಕೊಂಡಿರುವ ಅಸ್ಸುಪ್ಪಾಶಿಕ್ಷಣ ಕ್ರಮದ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ಸೌದಿ ಅರೇಬಿಯಾ ಮತ್ತು ತವರಿನ ಒಟ್ಟು 17 ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ ಕೆಲವು ವಿದ್ಯಾರ್ಥಿಗಳು ಉತ್ತಮ ಸಾಧನೆ ಮೆರೆದಿದ್ದಾರೆ.
 ಕೆಸಿಎಫ್ ಸೌದಿ ಅರೇಬಿಯ, ಯುನೈಟೆಡ್ ಅರಬ್ ಎಮಿರೇಟ್ಸ್, ಕತರ್, ಒಮಾನ್, ಬಹ್ರೈನ್ ಇತ್ಯಾದಿ ಗಲ್ಫ್ ರಾಷ್ಟ್ರಗಳಲ್ಲಿ ಅಸ್ಸುಫ್ಫಾ ಧಾರ್ಮಿಕ ಕೋಸ್‌ನ್ನು ಅನಿವಾಸಿಗಳಿಗಾಗಿ ಆರಂಭಿಸಿದೆ. ಇದರ ಸೌದಿ ರಾಷ್ಟ್ರಮಟ್ಟದಲ್ಲಿ ರಿಯಾದ್, ದಮ್ಮಾಮ್, ಜಿದ್ದಾ ಮತ್ತು ಮದೀನಾ ಪ್ರಾಂತೀಯವನ್ನು ಕೇಂದ್ರವಾಗಿಟ್ಟುಕೊಂಡು 44 ಕೇಂದ್ರಗಳಲ್ಲಿ ಅಸ್ಸುಫ್ಪಾತರಗತಿಗಳುಗಳು ನಡೆಯುತ್ತಿವೆ. ಇದರ ವಾರ್ಷಿಕ ಪಬ್ಲಿಕ್ ಪರೀಕ್ಷೆಯು ಸೌದಿ ಅರೇಬಿಯಾ ಮತ್ತು ಊರಿನ ಒಟ್ಟು 17 ಕೇಂದ್ರಗಳಲ್ಲಿ ಇತ್ತೀಚೆಗೆ ನಡೆದಿತ್ತು. ಇದರಲ್ಲಿ ಸೌದಿ ಅರೇಬಿಯಾ ರಾಷ್ಟ್ರಮಟ್ಟದಲ್ಲಿ ಉಮರ್ ಅಲಿ ಹಸನ್ ಗೇರುಕಟ್ಟೆ ಮದೀನಾ (96% ) ಪ್ರಥಮ ಸ್ಥಾನ, ಇಕ್ಬಾಲ್ ಹಾಜಿ ಉಳ್ಳಾಲ ಜಿದ್ದಾ(95%)ದ್ವೀತೀಯ ಸ್ಥಾನ ಹಾಗೂ ಮತ್ತು ಆಸಿಫ್ ಕೃಷ್ಣಾಪುರ ದಮ್ಮಾಮ್(92%) ತೃತೀಯ ಸ್ಥಾನ ಗಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಡಿ.ಪಿ .ಯೂಸುಫ್ ಸಖಾಫಿ ಬೈತಾರ್, ರಾಷ್ಟ್ರೀಯ ಎಜುಕೇಶನಲ್ ವಿಂಗ್ ಅಧ್ಯಕ್ಷ ಅಬ್ದುಲ್‌ಅಝೀಝ್ ಸಅದಿ ದಮ್ಮಮ್ ಮತ್ತು ಕನ್ವೀನರ್ ಅಲ್ತಾಫ್ ಈಶ್ವರಮಂಗಳ ಜಿದ್ದಾ ಹರ್ಷ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News