ವಿದೇಶಿಯರ ವಲಸೆ; ಅತಿಕ್ರಮಣಕ್ಕೆ ಸಮ- ಕುವೈಟ್ ಸಂಸದ

Update: 2017-01-18 12:41 GMT

ಕುವೈಟ್ ಸಿಟಿ,ಜ.18: ದೇಶದಲ್ಲಿ ವಿದೇಶಿಯರ ‘ಮಿತಿಮೀರಿದ’ ಹೆಚ್ಚಳ ವು ವಲಸೆ ಎನ್ನುವ ಬದಲು ಅತಿಕ್ರಮಣ ಎನ್ನುವಷ್ಟು ಗಂಭೀರವಾಗಿದೆ ಎಂದು ಕುವೈಟ್ ಸಂಸದ ಡಾ. ಅಬ್ದುಲ್ ಕರೀಂ ಅಲ್ ಕಂದರಿ ಹೇಳಿದ್ದಾರೆ.

ವಿದೇಶಿಯರ ಹೆಚ್ಚಳವನ್ನು ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯಬೇಕೆಂದು ಅವರು ಆಗ್ರಹಿಸಿದ್ದಾರೆ. ಕುವೈಟಿಯರು ಅವರದೇ ನಾಡಿನಲ್ಲಿ ಅಲ್ಪಸಂಖ್ಯಾತರಾಗಲು ಯಾವತ್ತೂ ಬಿಡಬಾರದು. ಹೀಗೆ ಹೇಳುವಾಗ ನಾನು ವಿದೇಶಿಯರ ವಿರುದ್ಧ ಮಾತಾಡುತ್ತಿದ್ದೇನೆ ಹಾಗೂ ಅವರನ್ನು ಒಟ್ಟಿಗೆ ದೇಶದಿಂದ ಗಡಿಪಾರುಮಾಡಬೇಕೆಂದು ಹೇಳುತ್ತಿದ್ದೇನೆ ಎಂದು ಯಾರೂ ತಪ್ಪು ತಿಳಿಯಬಾರದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಉದ್ಯೋಗ ಮಾರುಕಟ್ಟೆಗೆ ಅಗತ್ಯವಿರುವ ವಿದೇಶಿಗಳು ಮಾತ್ರ ಅಗತ್ಯವಿದೆ. ವಿದೇಶಿಯರ ಹೆಚ್ಚಳದಿಂದ ದೇಶದ ಶಿಕ್ಷಣ, ಸಾಮಾಜಿಕ, ಸಾರಿಗೆ ಇತ್ಯಾದಿ ಕ್ಷೇತ್ರದಲ್ಲಿ ಪ್ರಯಾಸ ಏರ್ಪಟ್ಟಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕಾನೂನು ನಿಬಂಧನೆಗಳಿಲ್ಲದೆ ದೇಶದ ಹಣವನ್ನು ಹೊರದೇಶಗಳಿಗೆ ಕಳುಹಿಸುವುದಕ್ಕೂ ವಿದೇಶಿಯರ ಹೆಚ್ಚಳ ಒಂದು ಕಾರಣವಾಗಿದೆ. ಅವರು ವಿದೇಶಿಯರ ವಿರುದ್ಧ ಕಟು ಧೋರಣೆಯನ್ನು ಪ್ರಕಟಿಸಿದ ಮೂರನೆ ಸಂಸದನಾಗಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News