ಶಾರ್ಜಾದಲ್ಲಿ ಏರ್ ಬಲೂನ್ ಪತನದಿಂದ 6ಮಂದಿಗೆ ಗಾಯ

Update: 2017-01-18 12:45 GMT

ಶಾರ್ಜಾ, ಜ.18: ಶಾರ್ಜಾದ ಉಪನಗರ ಅಲ್ ಮದಾಮ್ ಮರುಭೂಮಿಯಲ್ಲಿ ಹಾಟ್ ಏರ್ ಬಲೂನ್ ಪತನದಿಂದ ಆರು ಮಂದಿ ವಿದೇಶಿ ಪ್ರವಾಸಿಗರು ಗಾಯಗೊಂಡಿದ್ದಾರೆ. ಅವಗಡಕ್ಕೆ ಏನು ಕಾರಣ ಎಂದು ಸ್ಪಷ್ಟವಾಗಿಲ್ಲ. ಶಾರ್ಜಾ ಮಧ್ಯವಲಯ ಪೊಲೀಸ್ ಮುಖ್ಯಸ್ಥ ಕರ್ನಲ್ ಅಹಮದ್ ಬಿನ್ ದರ್ವೇಶ್ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಶನಿವಾರ ಬೆಳಗ್ಗೆ ಏರ್ ಬೆಲೂನ್ ಪತನವಾಗಿತ್ತು.

ಗಾಯಾಳುಗಳನ್ನು ಅಲ್ ಖಾಸ್ಮಿ ಆಸ್ಪತ್ರೆಗೆ ಸೇರಿಸಲಾಗಿದೆ. ಜಗತಿನಲ್ಲಿ ಇತ್ತೀಚೆಗೆ ಹಾಟ್ ಬೆಲೂನ್ ಅವಗಡ ಹೆಚ್ಚುತ್ತಿದೆ ಎನ್ನಲಾಗಿದೆ. ಅಮೆರಿಕದಲ್ಲಿ ಕಳೆದ ವರ್ಷ ವಿದ್ಯುತ್ ತಂತಿಗೆ ಹಾಟ್ ಬೆಲೂನ್ ಸ್ಪರ್ಷದಿಂದ ಹದಿನೈದು ಮಂದಿ ಮೃತಪಟ್ಟಿದ್ದರು.

ಟರ್ಕಿ, ಈಜಿಪ್ಟ್, ಸ್ಲೋವೇನಿಯಗಳಲ್ಲಿ ಕಳೆದವರ್ಷ ಹಾಟ್ ಬೆಲೂನ್ ಅವಗಡ ನಡೆದಿದೆ. ಕೆಲವೊಮ್ಮೆ ಕೆಟ್ಟ ಹವಾಮಾನ ಬೆಲೂನು ಹಾರಾಟಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News