ಖತೀಫ್‌ನಲ್ಲಿ ಭಯೋತ್ಪಾದನೆ ಆರೋಪದಲ್ಲಿ ಒಂದೇ ಕುಟುಂಬದ 6 ಮಂದಿಯ ಬಂಧನ

Update: 2017-01-20 06:53 GMT

ದಮಾಮ್, ಜ.20: ದಮಾಮ್ ನ ಸಮೀಪದ ಖತೀಫ್‌ನಲ್ಲಿ ಭಯೋತ್ಪಾದನಾ ಪ್ರಕರಣಕ್ಕೆ ಸಂಬಂಧ ಹೊಂದಿರುವ ಒಂದೇ ಕುಟುಂಬದ ಆರು ಮಂದಿಯನ್ನು ಪೊಲೀಸ್ ಭದ್ರತಾಪಡೆ ಬಂಧಿಸಿದೆ. ಖತೀಫ್‌ನ ಅವಾಮಿಯ್ಯದಲ್ಲಿ ಪೊಲೀಸ್ ದಾಳಿಯಲ್ಲಿ ಗೃಹಸಚಿವಾಲಯ ಹುಡುಕುತ್ತಿರುವ ಆರೋಪಿಗಳು ಸೆರೆಯಾಗಿದ್ದಾರೆ. ಮಂಗಳವಾರ ಪೊಲೀಸರಿಗೆ ಸೆರೆಸಿಕ್ಕಿದ್ದ ಹುಸೈನ್ ಅಲ್ ಫರಜ್ ನೀಡಿದ ಮಾಹಿತಿ ಆಧಾರದಲ್ಲಿ ಆರೋಪಿಗಳ ಬಂಧನ ನಡೆಯಿತು ಎಂದು ವರದಿ ತಿಳಿಸಿದೆ.

ಅವಾಮಿಯ್ಯದ ಅಲ್‌ಮಸೂರ ಸ್ಟ್ರೀಟ್‌ನ ಕುಟುಂಬ ಮನೆಯಿಂದ ಆರೋಪಿಗಳಲಿ ಹೆಚ್ಚಿನವರನ್ನು ಹಿಡಿದು ತರಲಾಗಿದೆ. ಅವಾಮಿಯ್ಯ ಕೇಂದ್ರವಾಗಿಟ್ಟು ಇವರು ದೇಶದ್ರೋಹ ಚಟುವಟಿಕೆ ನಡೆಸುತ್ತಿದ್ದರು. ಸ್ವದೇಶಿ ಪ್ರಜೆಗಳಾದ ಹುಸೈನ್ ಮುಹಮ್ಮದ್ ಅಲಿ ಅಲ್‌ಫರಜ್, ಮುಹಮ್ಮದ್ ಅಲಿ ಅಬ್ದುರ್ರಹೀಂ ಅಲ್‌ಫರಜ್, ಅಬ್ದುರ್ರಹೀಂ ಅಬ್ದುರ್ರಹೀಂ ಅಲ್‌ಫರಜ್, ಅಲಿಬಿನ್ ಅಹ್ಮದ್ ಅಲ್‌ಫರಜ್, ಹುಸೈನ್ ಮೂದುನ್ ಅಲ್‌ಫರಜ್ ಬಂಧಿಸಲ್ಪಟ್ಟಿರುವ ಆರೋಪಿಗಳಾಗಿದ್ದು, ಸ್ಥಳದಿಂದ ಪರಾರಿಯಾದ ಮಜೀದ್, ಅಬ್ದುರ್ರಹೀಂ ಅಲ್‌ಫರಜ್, ಸಲ್ಮಾನ್ ಅಲಿ ಸಲ್ಮಾನ್ ಅಲ್ ಫರಜ್‌ರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇವರು ಪೊಲೀಸ್ ಅಧಿಕಾರಿಗಳ ಹತ್ಯೆ, ದರೋಡೆ ನಡೆಸುವುದು, ಸಾರ್ವಜನಿಕ ಆಸ್ತಿ ನಾಶ ಮುಂತಾದ ಅಕ್ರಮವೆಸಗಲು ಯೋಜನೆ ಹಾಕಿದ ಮುಂತಾದ ವಿವಿಧ ಪ್ರಕರಣದಲ್ಲಿ ಇವರನ್ನು ಪೊಲೀಸರು ಹುಡುಕುತ್ತಿದ್ದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News