ಭಯೋತ್ಪಾದನೆ ಆರೋಪ: ಸೌದಿ ಜೈಲುಗಳಲ್ಲಿ ಇರುವವರು ಎಷ್ಟು ಮಂದಿ ? ಅದರಲ್ಲಿ ಭಾರತೀಯರು ಎಷ್ಟು ?

Update: 2017-01-20 11:25 GMT

ಜಿದ್ದ, ಜ. 20: ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದಲ್ಲಿ ಬಂಧಿಸಲಾದ ವಿವಿಧ ರಾಷ್ಟ್ರಗಳ 5,085 ಮಂದಿ ಸೌದಿ ಅರೇಬಿಯದ ವಿವಿಧ ಜೈಲುಗಳಲ್ಲಿ ಇದ್ದಾರೆ ಎಂದು ಸೌದಿ ಅರೇಬಿಯ ಗೃಹ ಸಚಿವಾಲಯ ತಿಳಿಸಿದೆ. ದೇಶದ ಐದು ವಿಶೇಷ ಇಂಟಲಿಜೆನ್ಸ್ ಜೈಲುಗಳಲ್ಲಿ ಇವರನ್ನು ಇಡಲಾಗಿದ್ದು, ಇವರಲ್ಲಿ 19 ಮಂದಿ ಭಾರತೀಯರು.

ವಿಶೇಷ ಕ್ರಿಮಿನಲ್ ಕೋರ್ಟು ಅಪರಾಧಿಗಳೆಂದು ತೀರ್ಪಿತ್ತವರ ಮತ್ತು ವಿಚಾರಣೆ ಎದುರಿಸುತ್ತಿರುವ ಕೈದಿಗಳ ಸಂಖ್ಯೆಇದು. ಸೌದಿ ಪ್ರಜೆಗಳ ಸಂಖ್ಯೆಯೇ ಅತಿಹೆಚ್ಚಾಗಿದ್ದು 4254 ಮಂದಿ ಇದ್ದಾರೆ. ಯಮನಿಗಳು 282, ಸಿರಿಯನ್ನರು 2,183 ಅಮೆರಿಕನ್ನರು, ಫ್ರಾನ್ಸ್, ಬೆಲ್ಜಿಯಂ, ಕೆನಡಾದ ತಲಾ ಒಬ್ಬರು, ಪಾಕಿಸ್ತಾನದ 68 ಮಂದಿ, ಸುಡಾನಿನ 29, ಈಜಿಪ್ಟ್‌ನ 57,ಜೋರ್ಡಾನ್‌ನ 19, ಅಫ್ಘಾನಿಸ್ತಾನದ 7, ಸೋಮಾಲಿಯದ 7, ಇರಾಕ್‌ನ5 , ಟರ್ಕಿಯ 4,ಬಾಂಗ್ಲಾದೇಶದ 4, ಫಿಲಿಪ್ಪೀನ್ಸ್‌ನ3, ಲೆಬನಾನ್‌ನ 3, ಮೊರೊಕ್ಕೊದ 2, ಮೌರಿತ್ತಾನಿಯದ 2, ಯುಎಇಯ 2, ಬಹ್ರೈನ್‌ನ 10, ಕತರ್‌ನ 2, ಅಲ್ಜೀರಿಯದ 1, ಚೀನಾದ 1, ಕಿರ್ಗಿಸ್ತಾನದ ಒಬ್ಬರು ಮುಂತಾದವರನ್ನು ಭಯೋತ್ಪಾದನಾ ಚಟುವಟಿಕೆಗಳ ಆರೋಪದಲ್ಲಿ ಬಂಧಿಸಿ ಜೈಲು ಸೇರಿಸಲಾಗಿದೆ. ಆಫ್ರಿಕನ್ ರಾಷ್ಟ್ರಗಳಾದ ಛಾಡ್, ಇತಿಯೋಪಿಯ, ನೈಜೀರಿಯ, ಮಾಲಿ, ಅಂಗೋಲಾ, ಬುಕಿನೊಫೋಸೊ, ದಕ್ಷಿಣಾಫ್ರಿಕಗಳಿಂದ ಮೂವತ್ತರಷ್ಟು ಮಂದಿಯನ್ನು ಭಯೋತ್ಪಾದನಾ ಚಟವಟಿಕೆ ಆರೋಪದಲ್ಲಿ ಬಂಧಿಸಲಾಗಿದೆ ಎಂದು ವರದಿತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News