ವಾಟ್ಸ್‌ಆ್ಯಪ್ ಗಲಾಟೆಯಲ್ಲಿ ಪತಿಯ ಸಾವು !

Update: 2017-01-20 11:20 GMT

ಅಬುಧಾಬಿ, ಜ.20: ಪತಿಯ ಮೊಬೈಲ್ ಫೋನ್‌ನ್ನು ಪತ್ನಿ ಪರಿಶೀಲಿಸಿದಾಗ ವಾಟ್ಸ್‌ಆ್ಯಪ್ ಸಂದೇಶದಲ್ಲಿ ಬೇರೊಬ್ಬಳು ಮಹಿಳೆಯ ಫೋಟೊ ಇರುವುದನ್ನು ನೋಡಿ ನಡೆದ ಗಲಾಟೆಯಲ್ಲಿ ಪತಿಮೃತಪಟ್ಟಿದ್ದು, ಅಬುಧಾಬಿ ಕ್ರಿಮಿನಲ್ ಕೋರ್ಟು ತಪ್ಪಿತಸ್ಥೆ ಪತ್ನಿಗೆ ಎರಡು ವರ್ಷ ಜೈಲುಶಿಕ್ಷೆ ವಿಧಿಸಿ ತೀರ್ಪಿತ್ತಿದೆ.

ಕೊಲ್ಲಲ್ಪಟ್ಟಿರುವ ಪತಿಯ ನಿಕಟ ಸಂಬಂಧಿಕರು ಆರೋಪಿ ಮಹಿಳೆಗೆ ಕ್ಷಮೆ ನೀಡಿದ ಹಿನ್ನೆಲೆಯಲ್ಲಿ ಕೋರ್ಟು ಗಲ್ಲುಶಿಕ್ಷೆಯನ್ನು ಜೈಲುಶಿಕ್ಷೆಯನ್ನಾಗಿ ಬದಲಿಸಿ ತೀರ್ಪುನೀಡಿತು ಎಂದು ವರದಿಯಾಗಿದೆ. ಪತಿಯ ವರ್ತನೆಯಲ್ಲಾದ ಬದಲಾವಣೆಯನ್ನು ಪತ್ನಿ ಗಮನಿಸಿದ್ದರು. ಆ ನಂತರ ದಂಪತಿಗಳ ನಡುವೆ ಜಗಳ ಆರಂಭವಾಗಿತ್ತು. ಒಂದುದಿನ ಪತಿ ನಿದ್ರಿಸಿದ್ದಾಗ ಪತ್ನಿ ಮೊಬೈಲ್ ಫೋನ್ ಪರಿಶೀಲಿಸಿ ತನ್ನ ಪತಿ ಬೇರೆ ಮಹಿಳೆಯೊಂದಿಗೆ ನಡೆಸಿರುವ ಮಾತುಕತೆ ಹಾಗೂ ಆ ಮಹಿಳೆಯ ಫೋಟೊವನ್ನು ನೋಡಿದ್ದಳು.

ಆಗಲೇ ಪತಿಯನ್ನು ನಿದ್ರೆಯಿಂದ ಎಬ್ಬಿಸಿದ ಪತ್ನಿ ಮೊಬೈಲ್‌ನಲ್ಲಿರುವ ಮಹಿಳೆ ಯಾರು ಎಂದು ಪ್ರಶ್ನಿಸಿದ ಗಲಾಟೆ ಮಾಡಿದ್ದಳು. ಈ ಮಹಿಳೆ ತನ್ನ ಎರಡನೆ ಹೆಂಡತಿ ಎಂದು ತಿಳಿಸಿದಾಗ ಕೋಪಗೊಂಡ ಮಹಿಳೆ ಅಡಿಗೆ ಮನೆಯಿಂದ ಚಾಕು ತಂದು ಪತಿಗೆ ತೋರಿಸಿ ಕೊಲ್ಲುವ ಬೆದರಿಕೆ ಹಾಕಿದ್ದಳು . ಈ ಸಂದರ್ಭದಲ್ಲಿ ಅವರಿಬ್ಬರ ನಡುವೆ  ಹೊಕೈ ನಡೆದು ಅಂತಿಮವಾಗಿ ಪತಿಯ ಎದೆಗೆ ಚಾಕು ಇರಿಯಲ್ಪಟ್ಟು ಪತಿ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ

ತನ್ನ ಕಕ್ಷಿದಾರೆ ಪತಿಯನ್ನು ಕೊಲೆ ಮಾಡುವ ಉದ್ದೇಶ ಹೊಂದಿರಲಿಲ್ಲ. ಪ್ರಮಾದವಶಾತ್ ಪತಿಯ ಸಾವು ಸಂಭವಿಸಿದೆ ಎಂದು ಮಹಿಳೆಯ ವಕೀಲರು ವಾದಿಸಿದ್ದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News