ಯುಎಇ: ಭಾರತೀಯ ಉದ್ಯಮಿಯ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

Update: 2017-01-20 15:34 GMT

ಶಾರ್ಜಾ, ಜ. 20: ಯುಎಇಯಲ್ಲಿರುವ ಭಾರತೀಯ ಉದ್ಯಮಿಯೊಬ್ಬರು ಶಾರ್ಜಾದಲ್ಲಿರುವ ತನ್ನ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

49 ವರ್ಷದ ಉದ್ಯಮಿ ಹಲವು ದಿನಗಳಿಂದ ನಾಪತ್ತೆಯಾಗಿದ್ದರು. ಅವರ ಹೆಸರು ಮತ್ತು ಇತರ ವಿವರಗಳನ್ನು ಪೊಲೀಸರು ಬಿಡುಗಡೆ ಮಾಡಿಲ್ಲ.

ಹಮದ್ ಬಿನ್ ಅಬ್ದುಲ್ಲಾ ರಸ್ತೆಯಲ್ಲಿರುವ ಕಟ್ಟಡವೊಂದರಲ್ಲಿರುವ ಉದ್ಯಮಿಯ ಕಚೇರಿಯಲ್ಲಿ ಅವರ ಮೃತದೇಹ ನೇತಾಡುತ್ತಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News