ತಾದಿಕ್, ಹುರೇಮಿಲದಲ್ಲಿ 1,815 ಕೋಟಿ ರೂ. ವೆಚ್ಚದ ಕಾಮಗಾರಿ

Update: 2017-01-21 15:54 GMT

ರಿಯಾದ್, ಜ. 21: ಸೌದಿ ಅರೇಬಿಯದ ತಾದಿಕ್ ಮತ್ತು ಹುರೇಮಿಲದಲ್ಲಿ ಸುಮಾರು ಒಂದು ಬಿಲಿಯ ಸೌದಿ ರಿಯಾಲ್ (ಸುಮಾರು 1,815 ಕೋಟಿ ರೂಪಾಯಿ) ವೆಚ್ಚದಲ್ಲಿ ಹಲವು ಯೋಜನೆಗಳ ಕಾಮಗಾರಿಗಳು ನಡೆಯುತ್ತಿವೆ ಎಂದು ರಿಯಾದ್ ಗವರ್ನರ್ ರಾಜಕುಮಾರ ಫೈಸಲ್ ಬಿನ್ ಬಂದರ್ ಹೇಳಿದ್ದಾರೆ.

ಆರೋಗ್ಯ, ಮೂಲಸೌಕರ್ಯ, ಶೈಕ್ಷಣಿಕ, ವಸತಿ, ವಿದ್ಯುತ್, ನೀರು ಮತ್ತು ಸಾಮಾಜಿಕ ಸೇವೆಗಳಿಗೆ ಸಂಬಂಧಿಸಿದ ಯೋಜನೆಗಳು ಜಾರಿಯಲ್ಲಿವೆ ಎಂದು ಕಾಮಗಾರಿಗಳ ಅಭಿವೃದ್ಧಿಯನ್ನು ಪರಿಶೀಲಿಸಿದ ಗವರ್ನರ್ ತಿಳಿಸಿದರು.

ತಾದಿಕ್‌ನಲ್ಲಿ 590 ಮಿಲಿಯ ಸೌದಿ ರಿಯಾಲ್ (ಸುಮಾರು 1071 ಕೋಟಿ ರೂಪಾಯಿ) ಮತ್ತು ಹುರೇಮಿಲದಲ್ಲಿ 370 ಮಿಲಿಯ ಸೌದಿ ರಿಯಾಲ್ (ಸುಮಾರು 672 ಕೋಟಿ ರೂಪಾಯಿ) ವೆಚ್ಚದ ಯೋಜನೆಗಳು ಜಾರಿಗೊಳ್ಳುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News