ಸೌದಿ ಕ್ಲಿನಿಕ್‌ಗಳಿಂದ 3,034 ಸಿರಿಯ ನಿರಾಶ್ರಿತರಿಗೆ ಚಿಕಿತ್ಸೆ

Update: 2017-01-21 16:36 GMT

ಅಮ್ಮಾನ್, ಜ. 21: ಸೌದಿ ರಾಷ್ಟ್ರೀಯ ವೈದ್ಯಕೀಯ ಆಂದೋಲನ ‘ಮೈ ಬ್ರದರ್, ಯುವರ್ ಹೆಲ್ತ್ ಈಸ್ ಮೈ ಕನ್ಸರ್ನ್’ದ ಅವಧಿಯಲ್ಲಿ ಸೌದಿ ಅರೇಬಿಯದ ಪರಿಣತ ಕ್ಲಿನಿಕ್‌ಗಳು ಜೋರ್ಡಾನ್‌ನ ಝಾತರಿ ಶಿಬಿರದಲ್ಲಿ 3,034 ಸಿರಿಯ ನಿರಾಶ್ರಿತರಿಗೆ ಚಿಕಿತ್ಸೆ ನೀಡಿವೆ.

ಅಭಿಯಾನದ 211ನೆ ವಾರದಲ್ಲಿ ಮಕ್ಕಳ ಕ್ಲಿನಿಕ್‌ಗಳಲ್ಲಿ 964 ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ದಾಖಲೆಗಳು ಹೇಳುತ್ತವೆ.

ಹೃದಯ ಕ್ಲಿನಕ್‌ಗಳಲ್ಲಿ 157, ಪ್ರಸೂತಿ ಕ್ಲಿನಿಕ್‌ಗಳಲ್ಲಿ 211, ದಂತ ಚಿಕಿತ್ಸೆ ಕ್ಲಿನಿಕ್‌ಗಳಲ್ಲಿ 136, ಸರ್ಜಿಕಲ್ ಯೂನಿಟ್‌ನಲ್ಲಿ 42, ಗಂಟು ನೋವು ಕ್ಲಿನಿಕ್‌ಗಳಲ್ಲಿ 157, ಚರ್ಮ ಚಿಕಿತ್ಸೆ ಕ್ಲಿನಕ್‌ಗಳಲ್ಲಿ 295 ಹಾಗೂ ಮೂಗು ಮತ್ತು ಗಂಟಲು ಕ್ಲಿನಿಕ್‌ಗಳಲ್ಲಿ 306 ಸಿರಿಯನ್ ನಿರಾಶ್ರಿತರಿಗೆ ಚಿಕಿತ್ಸೆ ನೀಡಲಾಗಿದೆ.

ಲಸಿಕೆ ಕ್ಲಿನಿಕ್‌ಗಳಲ್ಲಿ 226 ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಪ್ರಯೋಗಾಲಯಗಳಲ್ಲಿ 118 ರೋಗಪತ್ತೆ ಪರೀಕ್ಷೆಗಳನ್ನು ನಡೆಸಲಾಗಿದೆ.

ಕ್ಲಿನಿಕ್‌ಗಳಿಗೆ ಸಿರಿಯ ನಿರಾಶ್ರಿತರು ಪ್ರತಿ ದಿನ ಬರುತ್ತಿದ್ದಾರೆ ಎಂದು ವೈದ್ಯಕೀಯ ನಿರ್ದೇಶಕ ಡಾ. ಹಮೀದ್ ಅಲ್-ಮಾಫಲನಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News