ಮತ್ತೊಬ್ಬ ಗ್ವಾಂಟನಾಮ ಕೈದಿ ಸೌದಿ ಅರೇಬಿಯಾಕ್ಕೆ

Update: 2017-01-22 09:38 GMT

ರಿಯಾದ್, ಜ.22: ಅಮೆರಿಕದ ಗ್ವಾಂಟನಾಮ ಜೈಲಿನಿಂದ ಒಬ್ಬ ಕೈದಿ ಸೌದಿಅರೇಬಿಯಕ್ಕೆ ಬಂದಿಳಿದಿದ್ದಾರೆ. ಸೌದಿ ಪ್ರಜೆ ಜಬ್ರಾನ್ ಸಅದ್ ಅಲ್‌ಕಹ್ತಾನಿ ರಿಯಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿದರೆಂದು ಸೌದಿ ಅರೇಬಿಯ ಗೃಹ ಸಚಿವಾಲಯದ ಭದ್ರತಾ ವಿಭಾಗ ತಿಳಿಸಿದೆ.

ಭದ್ರತಾ ವಿಭಾಗದ ಸಂರಕ್ಷಣಾ ಕೇಂದ್ರಕ್ಕೆ ಕೈದಿಯನ್ನು ಹಸ್ತಾಂತರಿಸಲಾಗಿದ್ದು, ಕಾನೂನು ಶಿಷ್ಟಾಚಾರ ಮುಗಿಸಿ ಅವರನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಗೃಹಸಚಿವಾಲಯದ ವಕ್ತಾರರು ಹೇಳಿದ್ದಾರೆ.

ಹ್ತಾನಿಯ ಕುಟುಂಬಕ್ಕೆ ಸುದ್ದಿ ಮುಟ್ಟಿಸಲಾಗಿದೆಯಲ್ಲದೆ ಅವರನ್ನು ಭೇಟಿಯಾಗಲುಕುಟುಂಬಸದಸ್ಯರಿಗೆ ಅವಕಾಶ ಒದಗಿಸಲಾಗಿದೆ ಎಂದು ಗೃಹಸಚಿವ ಮತ್ತು ದೊರೆಯ ಉತ್ತರಾಧಿಕಾರಿ ಅಮೀರ್ ಮುಹಮ್ಮದ್ ಬಿನ್ ನಾಯಿಫ್‌ರ ಹೆಸರಿನ ಉಪಚಾರ ಸಂರಕ್ಷಣಾ ಕೇಂದ್ರ ತಿಳಿಸಿದೆ.

ಇದು ಗ್ವಾಂಟನಾಮದಿಂದ ಬಿಡುಗಡೆಗೊಳಿಸಿದ ಕೈದಿಗಳನ್ನು ಸ್ವೀಕರಿಸಿ ಕಾನೂನು ವಿಧಿವಿಧಾನಗಳನ್ನು ಕೈಗೊಳ್ಳುತ್ತವೆ. ಕಹ್ತಾನಿ ಸೇರಿ ಸೌದಿ ಅರೇಬಿಯಕ್ಕೆ 126 ಮಂದಿ ಗ್ವಾಂಟನಾಮ ಕೈದಿಗಳು ಮರಳಿದ್ದಾರೆ.

ಗ್ವಾಂಟನಾಮದಲ್ಲಿ ಇನ್ನೂ ಎಳು ಮಂದಿ ಸೌದಿ ಕೈದಿಗಳು ಬಾಕಿಯುಳಿದಿದ್ದಾರೆ. ಒಬಾಮ ಅಮೆರಿಕ ಅಧ್ಯಕ್ಷ ಪದವಿಯಿಂದ ಕೆಳಗಿಳಿಯುವ ಮೊದಲು ಬಿಡುಗಡೆಗೊಳಿಸಿದ ಕೊನೆ ಬ್ಯಾಚ್‌ನಲ್ಲಿ ಕಹ್ತಾನಿ ಇದ್ದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News