ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಸೇರ್ಪಡೆಗೆ ಹಣ ಕೇಳಿದ ಪ್ರಿನ್ಸಿಪಾಲ್ ವಿರುದ್ಧ ಕ್ರಮ

Update: 2017-01-23 11:58 GMT

ಕುವೈಟ್ ಸಿಟಿ, ಜ.23: ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಸೇರ್ಪಡೆಗೊಳಿಸಲು ಹೆತ್ತವರಿಂದ ಹಣ ಕೇಳಿದ ಸ್ಕೂಲ್ ಪ್ರಿನ್ಸಿಪಾಲ್ ವಿರುದ್ಧ ಕ್ರಮಜರಗಿಸಲು ಆದೇಶಿಸಲಾಗಿದೆ. ಹೆತ್ತವರಿಗಾಗಿದ್ದ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಹೆತ್ತವರನ್ನು ಸೇರಿಸಲಿಕ್ಕಾಗಿ ಒಂದು ದೀನಾರ್‌ಶುಲ್ಕವನ್ನು ಹವಲ್ಲಿಯದ ಖಾಸಗಿ ಸ್ಕೂಲ್ ಪ್ರಿನ್ಸಿಪಾಲ್ ಕೇಳಿದ್ದರು. ಸ್ಕೂಲ್ ಪ್ರಿನ್ಸಿಪಾಲರಿಂದಾದ ನಿಯಮೋಲ್ಲಂಘನೆಯನ್ನು ಶಿಕ್ಷಣ ಸಚಿವಾಲಯ ಗಂಭೀರವಾಗಿ ಪರಿಗಣಿಸಿದ್ದು ಕ್ರಮಜರಿಗಿಸಲು ಆದೇಶಿಸಿದೆ.

ಸ್ಕೂಲ್‌ಪ್ರಿನ್ಸಿಪಾಲ್ ನಿಯಮವನ್ನು ಉಲ್ಲಂಘಿಸಿದ್ದಾರೆ. ಅನುಮತಿ ಇರುವ ಟ್ಯೂಶನ್ ಶುಲ್ಕವಲ್ಲದೆ ಬೇರೆ ಯಾವ ಹಣವನ್ನು ಕೇಳುವಂತಿಲ್ಲ ಎಂದು ಹವಲ್ಲಿಯದ ಶಿಕ್ಷಣ ನಿರ್ದೇಶಕ ಮನ್ಸೂರ್ ಅಲ್ ತುಫೈರಿ ಹೇಳಿದರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News