ಮದೀನಾ ವಿಮಾನ ನಿಲ್ದಾಣ ಮಧ್ಯ ಪ್ರಾಚ್ಯದಲ್ಲಿ 2ನೆ ಶ್ರೇಷ್ಠ

Update: 2017-01-23 16:37 GMT

ರಿಯಾದ್, ಜ. 23: ಸೌದಿ ಅರೇಬಿಯದ ಮದೀನಾದಲ್ಲಿರುವ ರಾಜಕುಮಾರ ಮುಹಮ್ಮದ್ ಬಿನ್ ಅಬ್ದುಲಝೀಝ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 2016ರ ಎರಡನೆ ತ್ರೈಮಾಸಿಕದಲ್ಲಿ ಮಧ್ಯಪ್ರಾಚ್ಯದ ಎರಡನೆ ಶ್ರೇಷ್ಠ ವಿಮಾನ ನಿಲ್ದಾಣವಾಗಿತ್ತು ಎಂದು ವಿಮಾನ ನಿಲ್ದಾಣಗಳ ಅಂತಾರಾಷ್ಟ್ರೀಯ ಮಂಡಳಿ (ಎಸಿಐ) ಹೇಳಿದೆ.

ವಲಯದಲ್ಲಿರುವ 10 ವಿಮಾನ ನಿಲ್ದಾಣಗಳ ಪೈಕಿ ಮದೀನಾ ವಿಮಾನ ನಿಲ್ದಾಣವು ಪ್ರಯಾಣಿಕ ತೃಪ್ತಿಯಲ್ಲಿ ಒಟ್ಟು 5 ಅಂಕಗಳ ಪೈಕಿ 4.65 ಅಂಕಗಳನ್ನು ಗಳಿಸಿದೆ.

ವಾರ್ಷಿಕ 50 ಲಕ್ಷದಿಂದ 1.5 ಕೋಟಿ ಪ್ರಯಾಣಿಕ ಸಾಮರ್ಥ್ಯದ ಜಗತ್ತಿನ 80 ವಿಮಾನ ನಿಲ್ದಾಣಗಳ ಪೈಕಿ ಮದೀನಾ ನಿಲ್ದಾಣವು 11ನೆ ಸ್ಥಾನದಲ್ಲಿದೆ. ಅದೇ ವೇಳೆ, ಜಗತ್ತಿನ 267 ಉನ್ನತ ವಿಮಾನ ನಿಲ್ದಾಣಗಳ ಪೈಕಿ ಅದು 38ನೆ ಸ್ಥಾನವನ್ನು ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News