ದುಬೈ: ಅಂತರ್ ಶಾಲಾ ಕಿರಾಅತ್ ಸ್ಪರ್ಧೆಯಲ್ಲಿ ಶಮಾ ತಸ್ನೀಮ್ ಪ್ರಥಮ
Update: 2017-01-24 13:17 IST
ದುಬೈ, ಜ.24 : ದುಬೈನ ಜುಮೈರಾ ಎಮಿರೇಟ್ಸ್ ಇಂಗ್ಲೀಷ್ ಸ್ಪೀಕಿಂಗ್ ಶಾಲೆಯಲ್ಲಿ ಇತ್ತೀಚಿಗೆ ನಡೆದ ಬೃಹತ್ ಅಂತರ್ ಶಾಲಾ ಕಿರಾಅತ್ ಸ್ಫರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಶಮಾ ತಸ್ನೀಮ್ ಪ್ರಥಮ ಸ್ಥಾನ ಪಡೆದಿದ್ದಾಳೆ.
ಶಮಾ ತಸ್ನೀಮ್ ಉಪ್ಪಿನಂಗಡಿಯ ಅಹಮದ್ ಬಾವ ಹಾಗೂ ಮೈಮುನಾ ದಂಪತಿಯ ಪುತ್ರಿ. ಈಕೆ ದುಬೈನ ಜೆಮ್ಸ್ ಅವರ್ ಓನ್ ಇಂಗ್ಲಿಷ್ ಹೈ ಸ್ಕೂಲ್ ನಲ್ಲಿ 8ನೆ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ಕಳೆದ ಬಾರಿಯೂ ಶಮಾ ತಸ್ನೀಮ್ ಕಿರಾಅತ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿಯಾಗಿದ್ದಳು.
ಈ ಸ್ಪರ್ಧೆಯಲ್ಲಿ ವಿವಿಧ ದೇಶಗಳ, 32 ಶಾಲೆಗಳ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.