×
Ad

ಶಾರ್ಜದಲ್ಲಿ 4.60 ಕೋಟಿ ದಿರ್ಹಮ್ ಮೌಲ್ಯದ ಮಾದಕವಸ್ತು ವಶ: ಹಲವರ ಬಂಧನ

Update: 2017-01-24 16:51 IST

ಶಾರ್ಜ,ಜ.24: ಎರಡು ಬೃಹತ್ ಮಾದಕವಸ್ತು ತಂಡಗಳನ್ನು ಶಾರ್ಜ ಪೊಲೀಸರು ಸಿನಿಮೀಯ ಶೈಲಿಯಲ್ಲಿ ದಾಳಿ ನಡೆಸಿ ಪತ್ತೆಹಚ್ಚಿದ್ದು, ಹಲವರನ್ನು ಬಂಧಿಸಿದ್ದು, ಅವರಿಂದ 4.60 ಕೋಟಿ ದಿರ್ಹಮ್ ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಎಂಬತ್ತುಲಕ್ಷ ದಿರ್ಹಮ್‌ನ ಬೆಲೆಯ 300 ಕಿಲೊ ಆಶಿಷ್, 4 ಕೋಟಿ ದಿರ್ಹಮ್‌ನ ಮಾದಕವಸ್ತು ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ದಿ ಡೋರ್ಕನ್ಸ್ ಗ್ಯಾಂಗ್, ಸ್ಯೂಟ್ ಕೇಸ್ ಆಫ್ ಡೆತ್ ಎನ್ನುವ ಹೆಸರಿನಲ್ಲಿ ಪೊಲೀಸರು ಕಾರ್ಯಾಚರಣೆಯನ್ನು ನಡೆಸಿದ್ದರು ಎಂದು ಶಾರ್ಜ ಪೊಲೀಸ್ ಉಪಮುಖ್ಯಸ್ಥ ಕರ್ನಲ್ ಅಬ್ದುಲ್ಲ ಮುಬಾರಕ್ ಬಿನ್ ಆಮರ್ ಸುದ್ದಿಗೊಷ್ಠಿಯಲ್ಲಿ ತಿಳಿಸಿದ್ದಾರೆ.

ಮಾದಕವಸ್ತು ಪತ್ತೆ ಕಾರ್ಯಾಚರಣೆ ವೀಡಿಯೊವನ್ನು ಸುದ್ದಿಗೋಷ್ಠಿಯಲ್ಲಿ ಅವರು ಪ್ರದರ್ಶಿಸಿದ್ದಾರೆ. ವ್ಯಾಪಾರ ಕ್ಷೇತ್ರದಲ್ಲಿ ದೊಡ್ಡ ವಾಹನಗಳ ದುರಸ್ತಿಕಾರ್ಯ, ಮತ್ತು ಯಂತ್ರಭಾಗಗಳನ್ನು ಮಾರಾಟ ಮಾರಾಟ ಮಾಡುತ್ತಿದ್ದ ಪಾಕ್ ಪ್ರಜೆಯೊಬ್ಬನಿಂದ ಹಶೀಷ್‌ನ್ನು ವಶಪಡಿಸಿಕೊಳ್ಳಲಾಗಿದೆ. ಮಾದಕವಸ್ತು ಮಾತ್ರೆಗಳನ್ನು ಅರಬ್ ವಂಶೀಯನಿಂದ ವಶಪಡಿಸಿಕೊಳ್ಳಲಾಗಿದೆ.

ಪಾಕಿಸ್ತಾನಿ ವ್ಯಕ್ತಿ ಗಲ್ಫ್ ವಲಯದ ಮಾದಕವಸ್ತು ಜಾಲದ ಮುಖ್ಯಸ್ಥ ಈತ ಎಂದು ಪೊಲೀಸರು ಹೇಳಿದ್ದಾರೆ. ಈತನಲ್ಲದೆ ಇತರ ಎಮಿರೇಟ್‌ಗಳಲ್ಲಿ ಕಾರ್ಯಾಚರಿಸುತ್ತಿರುವ ಇತರ ನಾಲ್ವರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸೂಟ್‌ಕೇಸ್ ಆಫ್ ಡೆತ್ ಕಾರ್ಯಾಚರಣೆಯಲ್ಲಿ ಅರಬ್ ವಂಶೀಯನನ್ನು ಬಂಧಿಸಲಾಗಿದೆ. 12.7 ಲಕ್ಷ ಮಾದಕವಸ್ತು ಮಾತ್ರೆಗಳನ್ನು ಇವನಿಂದ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಆಧುನಿಕ ಸೌಕರ್ಯವಿರುವ ಬಹುಮಹಡಿ ಕಟ್ಟಡದ ವಾಸಸ್ಥಳದಲ್ಲಿ ಈತ ಪ್ಲಾಸ್ಟಿಕ್ ಚೀಲ,ಸ್ಯೂಟ್‌ಕೇಸ್‌ಗಳಲ್ಲಿ ಮಾತ್ರೆಗಳನ್ನು ಅಡಗಿಸಿಟ್ಟಿದ್ದ. ನೆರೆದೇಶದಲ್ಲಿ ಕಾರ್ಯಾಚರಿಸುತ್ತಿರುವ ಮಾದಕವಸ್ತು ಜಾಲಗಳ ಕುರಿತು ಆರೋಪಿಗಳಿಂದ ಮಾಹಿತಿ ಲಭಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ಇವರ ಬಂಧನಕ್ಕೆ ಇಂಟರ್‌ಫೋಲ್‌ನ ನೆರವು ಯಾಚಿಸಲಿದ್ದು, ಇತ್ತೀಚೆಗೆ ಪತ್ತೆಹಚ್ಚಲಾದ ಬಹುದೊಡ್ಡ ಮಾದಕವಸ್ತು ಜಾಲವಿದು ಎಂದು ವರದಿತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News