ಜಿದ್ದಾ: ಭಾರತದ ಯುವಕ ಹಠಾತ್ ನಿಧನ, ನೋಡಲು ಬಂದ ಚಿಕ್ಕಪ್ಪ ಆಘಾತದಿಂದ ನಿಧನ
ಜಿದ್ದ,ಜ. 25: ಇಲ್ಲಿನ ಶರಫಿಯ್ಯದಲ್ಲಿ ಕೇರಳದ ಯುವಕ ಹೃದಯಾಘಾತದಿಂದ ನಿಧನರಾಗಿದ್ದು, ವಿಷಯ ತಿಳಿದು ಅಲ್ಲಿಗೆ ಬಂದ ಮೃತನ ಚಿಕ್ಕಪ್ಪ ಕೂಡಾ ಕುಸಿದು ಬಿದ್ದು ನಿಧನರಾದ ಘಟನೆ ನಡೆದಿದೆ. ಪೆರುಂದಲ್‌ಮಣ್ಣ ಉಚ್ಚಾರಕಡವ್‌ನ ಸಲ್ಮಾನ್(27) ಹಾಗೂ ಉಮರ್(52) ಮಂಗಳವಾರ ನಿಧನರಾದವ್ಯಕ್ತಿಗಳಾಗಿದ್ದು, ಸಲ್ಮಾನ್ ಬೆಳಗ್ಗೆ ವಾಸವಿದ್ದಕೋಣೆಯ ಬಾತ್‌ರೂಂನಲ್ಲಿ ಮೃತನಾದ ಸ್ಥಿತಿಯಲ್ಲಿ ಕಂಡು ಬಂದಿದ್ದರು. ಸಲ್ಮಾನ್‌ರ ನಿಧನ ಸುದ್ದಿಯನ್ನು ಶರಪಿಯ್ಯದಲ್ಲಿ ಟೈಲರ್ ಆಗಿ ದುಡಿಯುತ್ತಿದ್ದ ಅವರ ಚಿಕ್ಕಪ್ಪ ಉಮರ್‌ಗೆ ತಿಳಿಸಲಾಗಿತ್ತು. ಅವರು ಅಣ್ಣನ ಪುತ್ರನ ಮೃತದೇಹವನ್ನು ನೋಡಿದ ಕೂಡಲೆ ಕುಸಿದು ಬಿದ್ದರು. ಅವರನ್ನು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾದರೂ ಪ್ರಯೋಜನವಾಗಲಿಲ್ಲ. ಅವರು ಅಲ್ಲಿ ನಿಧನರಾದರು.
ಸಲ್ಮಾನ್ ಶರಫಿಯ್ಯದ ಡೆಟುಡೆ ಮಾಲ್‌ನ ಉದ್ಯೋಗಿಯಾಗಿದ್ದರು. ಇತ್ತೀಚೆಗೆ ಮದುವೆ ಆಗಿ ಊರಿಂದ ಶರಫಿಯ್ಯಕ್ಕೆ ಮರಳಿದ್ದರು. ಇಬ್ಬರ ಮೃತದೇಹವನ್ನೂ ಊರಿಗೆ ಕೊಂಡೊಯ್ಯಲಾಗುವುದು ಎಂದು ವರದಿ ತಿಳಿಸಿದೆ.