×
Ad

ಭಾರತದ ಗಣರಾಜ್ಯೋತ್ಸವ ಅಂಗವಾಗಿ ತ್ರಿವರ್ಣಗಳಲ್ಲಿ ಕಂಗೊಳಿಸುತ್ತಿರುವ ದುಬೈನ ಬುರ್ಜ್ ಖಲೀಫಾ

Update: 2017-01-25 20:20 IST

ದುಬೈ,ಜ.25: ಭಾರತದ 68ನೇ ಗಣರಾಜ್ಯೋತ್ಸವದ ಅಂಗವಾಗಿ ವಿಶ್ವದಲ್ಲಿಯೇ ಅತ್ಯಂತ ಎತ್ತರದ ಕಟ್ಟಡವಾಗಿರುವ ಇಲ್ಲಿಯ ಬುರ್ಜ್ ಖಲೀಫಾ ಬುಧವಾರ ರಾತ್ರಿಯಿಂದಲೇ ತ್ರಿವರ್ಣಗಳಾದ ಕೇಸರಿ,ಬಿಳಿ ಮತ್ತು ಹಸಿರು ಬಣ್ಣಗಳ ವಿದ್ಯುದ್ದೀಪಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿದೆ.

823 ಮೀಟರ್ ಎತ್ತರಕ್ಕೆ ತಲೆಯೆತ್ತಿ ನಿಂತಿರುವ ಬುರ್ಜ್ ಖಲೀಫಾಕ್ಕೆ ಅಬುಧಾಬಿಯ ಆಡಳಿತಗಾರ ಹಾಗೂ ಸಂಯುಕ್ತ ಅರಬ್ ಗಣರಾಜ್ಯಗಳ(ಯುಎಇ) ಅಧ್ಯಕ್ಷ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್ ಅವರ ಗೌರವಾರ್ಥ ಅವರ ಹೆಸರನ್ನಿಡ ಲಾಗಿದೆ. ಯುಎಇಯ ಏಳು ಗಣರಾಜ್ಯಗಳಲ್ಲಿ ದುಬೈ ಒಂದಾಗಿದೆ.

ಅಬುಧಾಬಿಯ ಯುವರಾಜ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ಗುರುವಾರ ದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News