ಬಹ್ರೈನ್‌ನಲ್ಲಿ ಭಾರತೀಯನ ನಿಧನ
Update: 2017-01-27 12:17 IST
ಮನಾಮ,ಜ.27: ರಾಬಿಯ ಇಲೆಕ್ಟ್ರಿಕಲ್ಸ್ ಸರ್ವೀಸ್‌ನಲ್ಲಿ ಕೆಲಸಕ್ಕಿದ್ದ ಎರ್ನಾಕುಲಂ ಕೋತಮಂಗಲಂ ಮಾದಿರಿಪ್ಪಿಳ್ಳಿ ಎಂಬಲ್ಲಿನ ರಾಜನ್ ಊನ್ನುಣ್ಣಿ(56) ಮನಾಮದ ಸಲ್ಮಾನಿ ಮೆಡಿಕಲ್ ಕಾಂಪ್ಲೆಕ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಕರುಳು ರೋಗದಿಂದ ಬಳಸುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದರು.
ನಿನ್ನೆ ಬೆಳಗ್ಗೆ ಅವರು ನಿಧನರಾಗಿದ್ದು, ಕಳೆದ ಇಪ್ಪತ್ತುವರ್ಷಗಳಿಂದ ಬಹ್ರೈನ್‌ನಲ್ಲಿ ಅವರು ದುಡಿಯುತ್ತಿದ್ದರು. ಸಲ್ಮಾನಿಯದ ಶವಾಗಾರದಲ್ಲಿ ಸದ್ಯ ಅವರ ಮೃತದೇಹವನ್ನು ಇಡಲಾಗಿದ್ದು, ಊರಿಗೆ ಕೊಂಡುಹೋಗಲಾಗುವುದು ಎಂದು ವರದಿ ತಿಳಿಸಿದೆ.