ಮಕ್ಕಾ ಕ್ರೇನ್ ದುರಂತ: ಮೊಕದ್ದಮೆ ರದ್ದು ಪಡಿಸಿದ ನ್ಯಾಯಾಲಯ
Update: 2017-01-27 21:15 IST
ಮಕ್ಕಾ, ಜ. 27: ಮಕ್ಕಾದಲ್ಲಿ 2015ರ ಸೆಪ್ಟಂಬರ್‌ನಲ್ಲಿ ಕ್ರೇನೊಂದು ಕುಸಿದು ಸಂಭವಿಸಿದ ದುರಂತಕ್ಕೆ ಸಂಬಂಧಿಸಿ 13 ಮಂದಿಯ ವಿರುದ್ಧ ದಾಖಲಿಸಲಾಗಿದ್ದ ಮೊಕದ್ದಮೆಯನ್ನು ಮಕ್ಕಾ ಕ್ರಿಮಿನಲ್ ನ್ಯಾಯಾಲಯ ಗುರುವಾರ ರದ್ದುಪಡಿಸಿದೆ.
ದುರಂತದಲ್ಲಿ 111 ಹಜ್ ಯಾತ್ರಿಗಳು ಮೃತಪಟ್ಟಿದ್ದರು.
ಪ್ರಕರಣದಲ್ಲಿ ತೀರ್ಪು ನೀಡುವುದು ತನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ. ಆರೋಪಿಗಳ ವಿರುದ್ಧ ನಿರ್ಲಕ್ಷ್ಯದ ಆರೋಪ ಹೊರಿಸಲಾಗಿತ್ತು.