ಸೌದಿ ಅರೇಬಿಯದಲ್ಲಿ ಅಪಘಾತ: ವಿವಿ ಪ್ರೊಫೆಸರ್ ಸಹಿತ ನಾಲ್ವರು ಬಲಿ

Update: 2017-01-28 10:59 GMT

ಜಿದ್ದಾ,ಜ. 28: ಅಲ್ ಬಿದಾ-ಹಕ್ಲ್ ರಸ್ತೆಯಲ್ಲಿ ನಡೆದ ವಾಹನ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ. ಮಕ್ಕದ ಉಮ್ಮುಲ್‌ಖುರ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಜೋರ್ಡಾನ್‌ನ ಮನ್ಸೂರ್ ಮಮೂದ್ ಮುಹಮ್ಮದ್, ಪತ್ನಿ ಆಲಿಯ ಖಾಲಿದ್, ಮಕ್ಕಳಾದ ಮುಹಮ್ಮದ್ ಮನ್ಸೂರ್, ಹುದೈಫಾ ಮನ್ಸೂರ್ ಮೃತಪಟ್ಟವರಾಗಿದ್ದಾರೆ. ದಂಪತಿಯ 15 ವರ್ಷ ವಯಸ್ಸಿನ ಹಿರಿಯ ಪುತ್ರ ಜಾಫರ್ ಮನ್ಸೂರ್ ಹಾಗೂ ಕೊನೆಯ ಮಗು ಆದಂ ಮನ್ಸೂರ್(ಎಂಟು ತಿಂಗಳು) ಗಾಯಗೊಂಡಿದ್ದಾರೆ.

ಇವರು ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ಕಳಕೊಂಡು ಮಗುಚಿ ಬಿದ್ದಿತ್ತು. ರಸ್ತೆಯಿಂದ ಕೆಳಗಿನ ತಗ್ಗುಪ್ರದೇಶಕ್ಕೆ ಹಲವು ಬಾರಿ ಉರುಳಿತ್ತು. ಇದರಿಂದ ದಂಪತಿ ಮತ್ತು ಇಬ್ಬರು ಮಕ್ಕಳ ಸ್ಥಳದಲ್ಲೇ ಮೃತರಾಗಿದ್ದಾರೆ. ಗಾಯಾಳು ಜಾಫರ್ ಮನ್ಸೂರ್‌ನ ಬೆನ್ನುಹುರಿಗೆ ಗಂಭೀರ ಗಾಯಗಳಾಗಿವೆ. ಆದರೆ ಎಂಟು ತಿಂಗಳ ಮಗುವಿಗೆ ಗಂಭೀರ ಗಾಯಗಳಾಗಿಲ್ಲ ಎಂದು ವರದಿತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News