ನೂರುಲ್ ಹುದಾ ಫ್ರಿಜ್ ಮುರಾರ್ ಕ್ಲಸ್ಟರ್ ಅಸ್ಥಿತ್ವಕ್ಕೆ

Update: 2017-01-28 16:27 GMT

ದುಬೈ,ಜ.28 : ವಿಶ್ವ ಪ್ರಸಿದ್ದ ದಾರುಲ್ ಹುದಾ ಚೆಮ್ಮಾಡ್ ಇದರ ಕರ್ನಾಟಕದ ಅಂಗ ಸಂಸ್ಥೆಯಾದ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರು ಇದರ ದುಬೈ ಸಮಿತಿ ಅಧೀನದಲ್ಲಿ ದೇರಾ ಫ್ರಿಜ್ ಮುರಾರ್ ಕ್ಲಸ್ಟರ್ ರೂಪೀಕರಣ ಕಾರ್ಯಕ್ರಮವು ಜ 24 ಮಂಗಳವಾರ ಅಸ್ತಮಿಸಿದ ಬುಧವಾರ ರಾತ್ರಿ ಜನಾಬ್ ರಫೀಕ್ ಸಂಪ್ಯರವರ ನಿವಾಸದಲ್ಲಿ ನಡೆಯಿತು.

ನೂರುಲ್ ಹುದಾ ದುಬೈ ಸಮಿತಿಯ ಅದ್ಯಕ್ಷರಾದ ಬಹುಮಾನ್ಯ ಸುಲೈಮಾನ್ ಮೌಲವಿ ಕಲ್ಲೆಗರವರ ಅದ್ಯಕ್ಷತೆಯಲ್ಲಿ ಆರಂಭವಾದ ಸಭೆಯಲ್ಲಿ ನೂರುಲ್ ಹುದಾ ದುಬೈ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಝೀಝ್ ಸೋಂಪಾಡಿಯವರು ನೆರೆದವರನ್ನು ಸಭೆಗೆ  ಹಾರ್ಧಿಕವಾಗಿ ಸ್ವಾಗತಿಸಿದರು.

ಬಹುಮಾನ್ಯ ಸುಲೈಮಾನ್ ಮೌಲವಿ ಕಲ್ಲೆಗರವರು ಮಾತನಾಡಿ “ದಾನ ಧರ್ಮಗಳಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ, ಆಪತ್ತುಗಳಿಂದ ರಕ್ಷಣೆ ಸಿಗುತ್ತದೆ ಅಲ್ಲದೆ ಅಲ್ಲಾಹನು ದಾನ ಮಾಡುವ ವಿಶ್ವಾಸಿಯ ಆಯಸ್ಸನ್ನು ಅದಿಕಗೊಳಿಸುತ್ತಾನೆ” ಎಂಬ ಹದೀಸ್ ಮತ್ತು ಕುರ್ ಆನ್ ಉಪದೇಶಗಳ ಬಗ್ಗೆ ವಿವರಿಸಿದರು. ಮುಂದೆ ಮಾತನಾಡಿ ಕರ್ನಾಟಕದಲ್ಲಿರುವ ಬೆರಳೆನಿಕೆಯ ಧಾರ್ಮಿಕ ವಿದ್ಯಾ ಸಂಸ್ಥೆಗಳಿಂದ ಕರ್ನಾಟಕದ ಮುಸ್ಲಿಮರ ಧಾರ್ಮಿಕ ಅಜ್ಞಾನವನ್ನು ನೀಗಿಸಲು ಸಾಧ್ಯವಿಲ್ಲ. ಆದ್ದರಿಂದ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣದಲ್ಲಿ ಕ್ರಾಂತಿಯನ್ನು ಸೃಷ್ಟಿಸಿದ ವಿಶ್ವ ವಿಖ್ಯಾತ ದಾರುಲ್ ಹುದಾ ಚೆಮ್ಮಾಡ್ ಇಸ್ಲಾಮಿಕ್ ವಿಶ್ವ ವಿದ್ಯಾಲಯ ಇದರ ಕರ್ನಾಟಕದ ಅಂಗ ಸಂಸ್ಥೆಯಾದ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಎಂಬ ಮಹತ್ತರವಾದ ವಿದ್ಯಾ ಸಂಸ್ಥೆ ಬೆಳೆದು ಧಾರ್ಮಿಕ ಜ್ಞಾನವನ್ನು ಸಮಗ್ರವಾಗಿ ಪಸರಿಸಲು ಸನ್ನದ್ದವಾಗುತ್ತಿದೆ. ಈ ವಿದ್ಯಾ ಸಂಸ್ಥೆಯ ಭಾಗವಾಗಲು ಉತ್ಸಾಹ ತೋರಿಸಿದ ನೀವು ಭಾಗ್ಯವಂತರು. ನಮ್ಮ ಜೀವನದಲ್ಲಿ ಇಂತಹ ಉತ್ತಮ ಕೆಲಸ ಮಾಡಲು ಸಿಕ್ಕಿರುವ ಈ ಅವಕಾಶವನ್ನು ಉಪಯೋಗಿಸಿ ನೂರುಲ್ ಹುದಾ ಅಕಾಡೆಮಿಯ ಉನ್ನತಿಗಾಗಿ ವಿನಿಯೋಗಿಸಬೇಕು ಎಂಬ ಹಿತವಚನಗಳನ್ನು ನೀಡುತ್ತಾ ಸಭೆಯನ್ನು ಉದ್ಘಾಟಿಸಿದರು. 

ನೂರುಲ್ ಹುದಾ ದುಬೈ ಸಮಿತಿಯ ಕಾರ್ಯಾದ್ಯಕ್ಷರಾದ ಜನಾಬ್ ಅನ್ವರ್ ಮಣಿಲರವರು ಚುನಾವಣಾ ಅಧಿಕಾರಿಯಾಗಿ ಮಾತನಾಡಿ ನೂರುಲ್ ಹುದಾ ಫ್ರಿಜ್ ಮುರಾರ್ ಕ್ಲಸ್ಟರ್ ಸಮಿತಿಗೆ ಮತ್ತು ಆಯ್ಕೆಯಾಗುವ ಪಧಾದಿಕಾರಿಗಳ ಜವಾಬ್ದಾರಿಗಳನ್ನು ತಿಳಿಸಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದರು.

ನೂರುಲ್ ಹುದಾ ದೇರಾ ಫ್ರಿಜ್ ಮುರಾರ್ ಕ್ಲಸ್ಟರ್ ಪದಾಧಿಕಾರಿಗಳ ವಿವರ :

ಗೌರವಾಧ್ಯಕ್ಷರು : ಉಸ್ಮಾನ್ ಕೆಮ್ಮಿಂಜೆ

ಅದ್ಯಕ್ಷರು : ರಫೀಕ್ ಸಂಪ್ಯ, ಪ್ರಧಾನ ಕಾರ್ಯದರ್ಶಿ : ಲತೀಫ್ ದೇಲಂಪಾಡಿ,ಕೋಶಾಧಿಕಾರಿ : ಶೆರೀಫ್ ಕಟ್ಟತ್ತಾರ್, ಉಪಾಧ್ಯಕ್ಷರು : ಮುಸ್ತಫಾ ಉಜಿರೆ, ಇಕ್ಬಾಲ್ ಬನ್ನೂರು

ಕಾರ್ಯದರ್ಶಿಗಳು : ಹಾರಿಸ್ ಪದಡ್ಕ, ರಾಝಿಕ್ ಪೊಲಾಜೆ, ಉಪದೇಶಕರು: ಬಾತಿಷ ಪರ್ಲಡ್ಕ, ಶಾಹುಲ್ ಬಿ.ಸಿ ರೋಡ್, ರಝಾಕ್ ಉಸ್ತಾದ್ ಪಾತೂರು

ಸಂಘಟನಾ ಕಾರ್ಯದರ್ಶಿ : ಅಬ್ದುಲ್ಲಾ ನಯೀಮಿ, ಸಂಚಾಲಕರು: ಮಸೂದ್ ಉಜಿರೆ, ಮುಹಮ್ಮದ್ ಯೂಸುಫ್ ಬಾಂಬೆ ಮಾಡನ್ನೂರು, ವಿಲಾಯತ್ ಕಾಪು, ಖಾದರ್ ಕಟ್ಟತ್ತಾರ್, ಇಶಾಕ್ ಉಜಿರೆ, ಅಬ್ದುಲ್ಲಾ ಪುತ್ತೂರು, ಶಫೀಕ್ ಪೊಲಾಜೆ, ನಿಝಾರ್ ಕಟ್ಟತ್ತಾರ್.

ಕಾರ್ಯಕಾರಿ ಸಮಿತಿ ಸದಸ್ಯರು : ಅಶ್ರಫ್ ಬುಳೇರಿಕಟ್ಟೆ, ಉಮ್ಮರ್ ರೆಂಜಲಾಡಿ, ಬಷೀರ್ ಕೆಮ್ಮಿಂಜೆ, ಶಾಫಿ ಕಳ್ಳುಗುಂಡಿ, ಇಮ್ರಾನ್ ಮಜಿಲೋಡಿ, ನೌಫಲ್ ಅಬ್ದುಲ್ಲಾ, ನಾಸಿರ್ ಬಪ್ಪಳಿಗೆ, ಇಲ್ಯಾಸ್ ಕಡಬ, ಅನ್ಸಾಫ್ ಪಾತೂರು, ಇಫ್ತಿಕಾರ್ ಕಣ್ಣೂರು.

ಅನ್ವರ್ ಮಣಿಲರವರು ಚುನಾವಣಾ ಅಧಿಕಾರಿಯಾಗಿ ತನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ನೂತನ ಸಮಿತಿಗೆ ಶುಭ ಹಾರೈಸಿದರು. 

ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಜನಾಬ್ ಶರೀಫ್ ಕಾವುರವರು ನೂತನ ಸಮಿತಿಗೆ ಶುಭ ಹಾರೈಸಿ  ಮಾತನಾಡಿ ಸಮಿತಿಗೆ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಕ್ಯಾಂಪಸ್ ಕಟ್ಟಡದ ಕಾಮಗಾರಿಯು ಈಗಾಗಲೇ ಪ್ರಾರಂಭಗೊಂಡಿದೆ ಮತ್ತು ಕೆಲಸಗಳು ವೇಗವಾಗಿ ನಡೆಯುತ್ತಿದೆ ಎಂದು ಹೇಳುತ್ತಾ ಸಮಿತಿಗೆ ಇನ್ನಷ್ಟು ಸದಸ್ಯರನ್ನು ಸೇರಿಸಿ ಎಲ್ಲರೂ ನೂರುಲ್ ಹುದಾ ಅಕಾಡೆಮಿಯ ಉನ್ನತಿಗಾಗಿ ಶ್ರಮಿಸಬೇಕೆಂದು ಕೇಳಿಕೊಂಡರು. 

ನೂರುಲ್ ಹುದಾ ಫ್ರಿಜ್ ಮುರಾರ್ ಕ್ಲಸ್ಟರ್ ನೂತನ ಗೌರವಾಧ್ಯಕ್ಷರಾದ ಜನಾಬ್ ಉಸ್ಮಾನ್ ಕೆಮ್ಮಿಂಜೆಯವರು ಮಾತನಾಡಿ ನೂರುಲ್ ಹುದಾ ವಿದ್ಯಾ ಸಂಸ್ಥೆಯು ನಮ್ಮದೇ ವಿದ್ಯಾ ಸಂಸ್ಥೆ ಆದ್ದರಿಂದ ಅದರ ಅಭಿವೃದ್ಧಿಗಾಗಿ ಪ್ರಯತ್ನ ಮಾಡುವುದು ನಮ್ಮ ಹೊಣೆಗಾರಿಕೆಯಾಗಿದೆ ಎಂದು ಹೇಳಿದರು. ನೂತನ ಅಧ್ಯಕ್ಷರಾದ ಜನಾಬ್ ರಫೀಕ್ ಸಂಪ್ಯ ರವರು ಮಾತನಾಡಿ ವಿದ್ಯಾ ಸಂಸ್ಥೆ ಅಬಿವೃದ್ದಿಗಾಗಿ ಸಮಿತಿಯನ್ನು ಉತ್ತಮವಾಗಿ ಮುನ್ನಡೆಸಲು ಪ್ರಯತ್ನಿಸುವ ಭರವಸೆಯನ್ನು ನೀಡುತ್ತಾ ಎಲ್ಲಾ ಸದಸ್ಯರ ಸಹಕಾರವನ್ನು ಕೋರಿದರು.

ನೂರುಲ್ ಹುದಾ ದುಬೈ ಸಮಿತಿಯ ಲೆಕ್ಕ ಪರಿಶೋಧಕರಾದ ಜನಾಬ್ ಅಶ್ರಫ್ ಪರ್ಲಡ್ಕ ರವರು ನೂತನ ಸಮಿತಿಗೆ ಶುಭ ಹಾರೈಸಿ ಧನ್ಯವಾದಗೈದರು.  ಸಭೆಯ ಕೊನೆಯಲ್ಲಿ ಎಲ್ಲರಿಗೂ ಉಪಹಾರ  ಏರ್ಪಡಿಸಲಾಗಿತ್ತು.

Writer - ವರದಿ: ಅಝೀಝ್ ಸೋಂಪಾಡಿ

contributor

Editor - ವರದಿ: ಅಝೀಝ್ ಸೋಂಪಾಡಿ

contributor

Similar News