ಇಂಡಿಯನ್ ಪ್ರವಾಸಿ ಫೋರಮ್ ಸಲಾಲ ವತಿಯಿಂದ "ಪೈಗಂ ಇ ರಸೂಲ್" (ಸ.ಅ) ಕಾರ್ಯಕ್ರಮ

Update: 2017-01-30 14:02 GMT

ಒಮನ್ , ಜ.30 :  ಪ್ರಸಕ್ತ ಸನ್ನಿವೇಶದಲ್ಲಿ ಭಾರತೀಯ ಮುಸಲ್ಮಾನರು ಅನುಭವಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಪ್ರವಾದಿ ಮುಹಮ್ಮದ್ (ಸ.ಅ) ಜೀವನದ ಮನಗಾಣುವಿಕೆ ಮತ್ತು ನೈಜ ಅನುಸರಣೆಯೇ ಪರಿಹಾರ ಎಂದು ಇಂಡಿಯನ್ ಪ್ರವಾಸಿ ಫೋರಮ್ ಇದರ ಓಮನ್ ನಾರ್ತ್ ಝೋನ್ ಅಧ್ಯಕ್ಷ ಮಕ್ಸೂದ್ ಶೇಖ್ ಇವರು ನುಡಿದರು.

ಅವರು ಇಂಡಿಯನ್ ಪ್ರವಾಸಿ ಫೋರಮ್ ಸಲಾಲ ಗ್ರೀನ್ ಪಾರ್ಕ್ ರೆಸ್ಟೋರೆಂಟ್ ನಲ್ಲಿ ಹಮ್ಮಿಕೊಂಡಂತಹ ಪೈಗಾಮ್ ಈ ರಸೂಲ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಪ್ರವಾದಿಯವರ ಜೀವನ ಅತಿ ದೊಡ್ಡ ಸವಾಲೊಂದನ್ನು ಅತಿಜಯಿಸಿದಂತಹ ಜೀವನವಾಗಿತ್ತು. ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ನಿಲ್ಲುವ ಧೈರ್ಯ ತೋರಿದರೆ ಬದಲಾವಣೆ ಸುಲಭ ಸಾಧ್ಯ ಅನ್ನುವುದಕ್ಕೆ ಪ್ರವಾದಿ ಜೀವನ ಮಾರ್ಗ ಅತ್ಯುತ್ತಮ ಉದಾಹರಣೆ. ಪ್ರವಾದಿಯವರು ಎದುರಿಸಿದ ಸವಾಲುಗಳ ಮುಂದೆ ಭಾರತೀಯ ಮುಸಲ್ಮಾನರ ಸವಾಲುಗಳು ಏನೇನೂ ಅಲ್ಲ . ಒಗ್ಗಟ್ಟಿನಿಂದ ಮುಂದೆ ಸಾಗಿದರೆ ನಾವು ನಮ್ಮ ಪರಿಸ್ಥಿತಿಯಲ್ಲಿ ಬದಲಾವಣೆ ತರಬಹುದು ಎಂದರು.
    

ಮೊಯಿದಿನ್ ಕುಟ್ಟಿ ಸಖಾಫಿ (ಇಂಡಿಯನ್ ಪ್ರವಾಸಿ ಫೋರಮ್ ಜಿಲ್ಲಾ ಸಮಿತಿ ಸದಸ್ಯ), ತಾಜುದ್ದೀನ್(ಸಮಾಜ ಸೇವಕ ಸಲಾಲ), ಮೊಹಮ್ಮದ್ ಶಕೀಲ್ ಶೇಖ್ (ಸೋಶಿಯಲ್ ಕ್ಲಬ್ ಕರ್ನಾಟಕ),  ನಜ್ಮುದ್ದೀನ್ (ಇಂಡಿಯನ್ ಪ್ರವಾಸಿ ಫೋರಮ್ ತಮಿಳುನಾಡು) ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 
       
13 ಜನವರಿಯಂದು ಸಾದಾ ಪಾರ್ಕ್ ನಲ್ಲಿ ನಡೆದಂತಹ ಸ್ಪೋರ್ಟ್ಸ್ ಮೀಟ್ ನ ಬಹುಮಾನ ವಿತರಣಾ ಕಾರ್ಯಕ್ರಮ ವೇದಿಕೆಯಲ್ಲಿ ನಡೆಯಿತು.

ಸಯ್ಯದ್ ಕುತ್ಬುದ್ದೀನ್ ಖುರ್ಹಾನ್ ಪಾರಾಯಣ ನಡೆಸಿದರು. ಫೈರೋಜ್ ಕಲ್ಲಡ್ಕ ಸ್ವಾಗತಿಸಿದರು , ಫಾರೂಕ್ ಕಣ್ಣಂಗಾರ್ ವಂದಿಸಿದರು.

ಇಸ್ತಿಯಾಕ್ ಒರಿಸ್ಸಾ ಮತ್ತು ಶಕೀಲ್ ಬೆಳ್ತಂಗಡಿ ಕಾರ್ಯಕ್ರಮ ನಿರೂಪಿಸಿದರು.

Writer - ವರದಿ: ಅಬೀದ್ ನಂದಾವಾರ

contributor

Editor - ವರದಿ: ಅಬೀದ್ ನಂದಾವಾರ

contributor

Similar News