×
Ad

2017ರಲ್ಲಿ ಆದಾಯವನ್ನು ಮೂರು ಪಟ್ಟು ಹೆಚ್ಚಿಸಲು ಕೆಇಎಫ್ ಸಜ್ಜು

Update: 2017-01-30 21:56 IST

ದುಬೈ,ಜ.30: ಆಫ್‌ಸೈಟ್ ತಯಾರಿಕೆ ತಂತ್ರಜ್ಞಾನದಲ್ಲಿ ವಿಶೇಷ ನೈಪುಣ್ಯ ಹೊಂದಿರುವ ದುಬೈ ಮೂಲದ ಕೆಇಎಫ್ ಹೋಲ್ಡಿಂಗ್ಸ್ ಇತ್ತೀಚಿಗೆ ಆರಂಭಗೊಂಡಿರುವ ತನ್ನ ಅಂಗಸಂಸ್ಥೆ ಕೆಇಎಫ್ ಇನ್‌ಫ್ರಾ ಯೋಜನೆಗಳನ್ನು ಸಕಾಲದಲ್ಲಿ ಫೂರ್ಣಗೊಳಸುವ ನಿರೀಕ್ಷೆಯಿರುವ ಹಿನ್ನೆಲೆಯಲ್ಲಿ ತನ್ನ ವಾರ್ಷಿಕ ಆದಾಯವನ್ನು 2017ರಲ್ಲಿ ಮೂರು ಪಟ್ಟು, ಅಂದರೆ ಸುಮಾರು ಒಂದು ಶತಕೋಟಿ ದಿರ್ಹಮ್‌ಗಳಿಗೆ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಸಾಗುತ್ತಿದ್ದೇನೆ ಎಂದು ಹೇಳಿದೆ.

 ರವಿವಾರ ಸುದ್ದಿಗೋಷ್ಠಿಯಲ್ಲಿ ಈ ವಿವರಗಳನ್ನು ನೀಡಿದ ಕೆಇಎಫ್ ಹೋಲ್ಡಿಂಗ್ಸ್‌ನ ಸ್ಥಾಪಕ ಹಾಗೂ ಅಧ್ಯಕ್ಷ ಫೈಝಲ್ ಕೊಟ್ಟಿಕೊಲ್ಲನ್ ಅವರು, ಕೆಇಎಫ್ ಇನ್‌ಫ್ರಾ ಭಾರತ, ಕೊಲ್ಲಿ ರಾಷ್ಟ್ರಗಳು ಮತ್ತು ಆಫ್ರಿಕಾದಂತಹ ಮಾರುಕಟ್ಟೆಗಳಲ್ಲಿನ ಪ್ರಮುಖ ಅಭಿವೃದ್ಧಿ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯ ಹೊಂದಿದೆ ಎಂದು ಫೈಝಲ್ ತಿಳಿಸಿದರು.

 ತಮಿಳುನಾಡಿನ ಕೃಷ್ಣಗಿರಿಯಲ್ಲಿರುವ ತನ್ನ ಕೆಇಎಫ್ ಇನ್‌ಫ್ರಾ ಒನ್ ಇಂಡಸ್ಟ್ರಿಯಲ್ ಪಾರ್ಕ್‌ನಲ್ಲಿ ಉತ್ಪಾದನೆಯು ಭರದಿಂದ ಸಾಗುತ್ತಿದ್ದು, ಹೆಚ್ಚುತ್ತಿರುವ ಯೋಜನೆಗಳ ಅಗತ್ಯಗಳನ್ನು ಪೂರೈಸುತ್ತಿದೆ. ಇದು ವಿಶ್ವದ ಅತ್ಯಂತ ಬೃಹತ್ ಮತ್ತು ತನ್ನ ಮಾದರಿಯ ಮೊದಲ ಸಮಗ್ರ ಆಫ್‌ಸೆಟ್ ತಯಾರಿಕೆ ಪಾರ್ಕ್ ಆಗಿದೆ ಎಂದು 2016ರಲ್ಲಿ 242 ಮಿಲಿಯನ್ ದಿರ್ಹಮ್ ಆದಾಯವನ್ನು ಗಳಿಸಿರುವ ಕೆಇಎಫ್ ಹೋಲ್ಡಿಂಗ್ ಸಮೂಹದ ಸ್ಥಾಪಕ ಫೈಝಲ್ ಹೇಳಿದರು.

100 ಮಿಲಿಯನ್ ವೆಚ್ಚದಲ್ಲಿ 2014ರಲ್ಲಿ ಅಸ್ತಿತ್ವ್ಕಕೆ ಬಂದಿರುವ ಕೆಇಎಫ್ ಇನ್‌ಫ್ರಾ ದ ನಾಲ್ಕು ಯೋಜನೆಗಳು ಪ್ರಗತಿಯಲ್ಲಿದ್ದು, ಇದರಲ್ಲಿ ಎರಡು ಮಿಲಿಯನ್ ಚದುರಡಿ ವಿಸ್ತೀರ್ಣದ, ವಾಣಿಜ್ಯಿಕ ಕಟ್ಟಡಗಳಿಂದ ಹಿಡಿದು ವಿಶೇಷ ಮೂಲಸೌಕರ್ಯವರೆಗಿನ ಇನ್ಫೋಸಿಸ್ ಯೋಜನೆ ಸೇರಿದೆ. ಇದರಲ್ಲಿ ಮೈಸೂರಿನಲ್ಲಿ 135 ಮೀ.ಎತ್ತರದ ಇನ್ಫೋಸಿಸ್ ಗಡಿಯಾರ ಗೋಪುರವೂ ಸೇರಿದ್ದು, ಇದು ನಿರ್ಮಾಣಗೊಂಡ ಬಳಿಕ ವಿಶ್ವದಲ್ಲಿಯೇ ಅತ್ಯಂತ ಎತ್ತರದ ಗಡಿಯಾರ ಗೋಪುರವಾಗಲಿದೆ ಫೈಝಲ್ ತಿಳಿಸಿದರು.

ಎಂಬೆಸಿ ಗ್ರೂಪ್‌ಗಾಗಿ 1.6 ಮಿಲಿಯನ್ ಚದುರಡಿ ವಿಸ್ತೀರ್ಣದ ವಾಣಿಜ್ಯಿಕ ಯೋಜನೆಯನ್ನೂ ಕೆಇಎಫ್ ಅಭಿವೃದ್ಧಿಗೊಳಿಸುತ್ತಿದೆ. ಬೆಂಗಳೂರಿನಲಿ ಈ ಯೋಜನೆ ಎಂಬೆಸಿ 7ಬಿ 13.5 ತಿಂಗಳ ದಾಖಲೆ ಅವಧಿಯಲ್ಲಿ ಪೂರ್ಣಗೊಳ್ಳಲಿದೆ. ಬೆಂಗಳೂರಿನ ಬಿಡದಿಯಲ್ಲಿ ಬಾಷ್‌ಗಾಗಿ ನಾಲ್ಕು ಲಕ್ಷ ಚದುರಡಿ ವಿಸ್ತೀರ್ಣದ ಉತ್ಪಾದನಾ ಕ್ಯಾಂಪಸ್ 11 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಕೊಚ್ಚಿಯಲ್ಲಿ 130,000 ಚದುರಡಿ ವಿಸ್ತೀರ್ಣದ ಜೆಮ್ಸ್ ಮಾಡರ್ನ್ ಅಕಾಡಮಿಯ ನಿರ್ಮಾಣ 2017,ಎಪ್ರಿಲ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಫೈಝಲ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷೆ ಶಬಾನಾ ಫೈಝಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News