ಸೌದಿಯಲ್ಲಿ ಯುಎಇಯಿಂದ 60 ಕೋಟಿ ದಿರ್ಹಮ್ ಹೂಡಿಕೆ
ರಿಯಾದ್,ಪೆ.3: ಸೌದಿಅರೇಬಿಯದ ವಾಣಿಜ್ಯಕ್ಷೇತ್ರದಲ್ಲಿ ಯುಎಇ 60ಕೋಟಿ ದಿರ್ಹಮ್ ಹೂಡಿಕೆ ನಡೆಸಲಿದೆ. ದುಬೈ ಇನ್ವೆಸ್ಟ್‌ಮೆಂಟ್ ಕಂಪೆನಿಯ ಬೋರ್ಡ್ ಸದಸ್ಯ ಹಾಗೂ ಉನ್ನತ ಅಧಿಕಾರಿ ಖಾಲಿದ್ ಬಿನ್ ಕಲ್ಬಾನ್, ರಿಯಾದ್‌ನಗರದಿಂದ 30 ಕಿಲೊಮೀಟರ್ ದೂರದ ವಾಣಿಜ್ಯ ನಗರದಲ್ಲಿ ವಾಣಿಜ್ಯ ಸಂಸ್ಥೆಗಳನ್ನು ತೆರೆಯಲಿಕ್ಕಾಗಿ ಬರ್‌ದುಬೈ ಎಂಬ ಕಂಪೆನಿಗೆ ರೂಪು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಆರ್ಥಿಕ ಏಜೆನ್ಸಿ ಬ್ಲೂಮ್‌ಬರ್ಗ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಸೌದಿ ಅರೇಬಿಯ ಮತ್ತು ಯುಎಇ ನಡುವೆ ದೀರ್ಘಕಾಲದಿಂದ ಸೌಹಾರ್ದ ಮತ್ತುಆರ್ಥಿಕ ಸಹಕಾರಮುಂದುವರಿಯುತ್ತಿದೆ. ಇದರ ಅಂಗವಾಗಿ ಹೊಸ ವಾಣಿಜ್ಯ ಕೇಂದ್ರ ರೂಪುಗೊಳ್ಳುತ್ತಿದೆ. ಯುಎಇ ಮಾತ್ರವಲ್ಲ ಈಜಿಪ್ಟ್, ಮೊರೊಕ್ಕೊ ಅಂಗೋಲ ಮುಂತಾದೆಡೆ ದುಬೈ ಇನ್ವೆಸ್ಟ್ ಮೆಂಟ್ ಕಂಪೆನಿಗೆ ಹೂಡಿಕೆ ನಡೆಸಿದೆ.
ದುಬೈಶೇರು ಮಾರುಕಟ್ಟೆಯಲ್ಲಿ ಇನ್ವೆಸ್ಟ್ ಮೆಂಟ್ ಕಂಪೆನಿ ಪ್ರಾಬಲ್ಯವನ್ನು ಹೊಂದಿದೆ. ಇದರಲ್ಲಿ ನಾಲ್ಕು ಬಿಲಿಯನ್ ದಿರ್ಹಮ್‌ನ ಮೂಲ ಬಂಡವಾಳವಿದೆ. 1995ರಲ್ಲಿ ದುಬೈಇನ್ವೆಸ್ಟ್‌ಮೆಂಟ್ ಕಂಪೆನಿ ಆರಂಭಗೊಂಡಿತ್ತು. ಇದು ವಾಣಿಜ್ಯ ಸಂಸ್ಥೆಗಳೊಂದಿಗೆ ಮಧ್ಯಪ್ರಾಚ್ಯದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರವನ್ನೂ ನಡೆಸುತ್ತಿದೆ. ಸೌದಿ ಅರೇಬಿಯ ಹೊಸ ಆರ್ಥಿಕ ನೀತಿ ಮತ್ತು ವಿಷನ್ 2030ರ ಹಿನ್ನೆಲೆಯಲ್ಲಿ ಯುಎಇ ಕಂಪೆನಿಗಳು ರಿಯಾದ್‌ನಲ್ಲಿ ಆರಂಭಿಸಲು ಮುಂದಾಗಿವೆಎಂದು ವರದಿ ತಿಳಿಸಿದೆ.