×
Ad

ಬಹ್ರೈನ್‌ನಲ್ಲಿಯೂ ವ್ಯಾಟ್

Update: 2017-02-03 18:08 IST

ಮನಾಮ,ಫೆ.3: ಜಿಸಿಸಿ ದೇಶಗಳ ಸಾರ್ವತ್ರಿಕ ಮೌಲ್ಯವರ್ಧಿತ ತೆರಿಗೆ(ವ್ಯಾಟ್) ಸೆಲೆಕ್ಟಿವ್ ತೆರಿಗೆ ನೀತಿಗೆ ಬಹ್ರೈನ್ ಕೂಡಾ ಒಪ್ಪಿಗೆ ನೀಡಿದೆ. ಇದರಂತೆ ಕೆಲವು ಉತ್ಪನ್ನಗಳಿಗೆ ಶೇ,5 ತೆರಿಗೆ ವಿಧಿಸಲಾಗುವುದು. ಕಳೆದ ದಿವಸ ಹಣಕಾಸುಸಚಿವ ಶೇಕ್ ಅಮದ್‌ಬಿನ್ ಮುಹಮ್ಮದ್ ಅಲ್ ಖಲೀಫ ಇದಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿಮಾಡಿದ್ದಾರೆ. ಆಹಾರ ಸಾಮಗ್ರಿ ಮತ್ತು ಔಷಧಗಳಿಗೆ ಈ ತೆರಿಗೆ ಇಲ್ಲ. ಎಲ್ಲ ಜಿಸಿಸಿ(ಗಲ್ಫ್ ಕೋ ಅಪರೇಷನ್) ದೇಶಗಳು ಒಂದೇ ತೆರಿಗೆ ಪದ್ಧತಿ ಸಂಪ್ರದಾಯ ಜಾರಿಗೆ ತರಲಿವೆ. ಇದಕ್ಕೆ ಸಂಬಂಧಿಸಿದ ಸಂವಿಧಾನಿಕ ಮತ್ತು ಕಾನೂನಾತ್ಮಕ ಕೆಲಸ ಪೂರ್ಣಗೊಳ್ಳುವುದರೊಂದಿಗೆ ಹೊಸ ನಿಯಮ ಜಾರಿಗೊಳ್ಳಲಿದೆ.

ಇದಕ್ಕೆ ಸಂಬಂಧಿಸಿದ ಕಾನೂನುಶೂರಾ ಕೌನ್ಸಿಲ್‌ನಲ್ಲಿ ಪಾಸು ಮಾಡಿದ ಬಳಿಕ ವ್ಯಾಟ್ ಸಂಬಂಧಿಸಿದ ಕ್ರಮಗಳು ಚಾಲನೆಗೆ ಬರಲಿವೆ ಎಂದು ಸಚಿವರು ತಿಳಿಸಿದ್ದಾರೆ. ಹೊಸ ತೆರಿಗೆಸುಧಾರಣೆ ಆದಾಯ ತೆರಿಗೆಯಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ. ಜಿಸಿಸಿ ರಾಷ್ಟ್ರಗಳಲ್ಲಿ ಒಪ್ಪಂದವಾದ ವ್ಯಾಟ್ ತೆರಿಗೆ ಜಗತ್ತಿನಲ್ಲೇ ಅತಿಕಡಿಮೆ ಪ್ರಮಾಣದ್ದಾಗಿದೆಯೆಂದು ಸಚಿವರು ಹೇಳಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News