×
Ad

ಹಮ್ರಿಯ ಸಮುದ್ರ ತೀರದಲ್ಲಿ ಮೂವರು ಭಾರತೀಯರ ಮೃತದೇಹ ಪತ್ತೆ

Update: 2017-02-06 14:56 IST

ಶಾರ್ಜಾ,ಫೆ.6: ಶಾರ್ಜಾದ ಬಂದರು ನಗರವಾದ ಅಲ್ ಹಮ್ರಿಯ ಸಮುದ್ರ ತೀರದಲ್ಲಿ ಮೂವರು ಭಾರತೀಯ ಹಡಗು ನೌಕರರ ಮೃತದೇಹಗಳು ಪತ್ತೆಯಾಗಿವೆ ಎಂದು ಕರಾವಳಿ ಸಂರಕ್ಷಣಾ ದಳ ತಿಳಿಸಿದೆ. ಗಾಳಿಯಿಂದ ಓಲಾಡಿದ ಹಡಗಿನಿಂದ ಎಸೆಯಲ್ಪಟ್ಟು ಇವರು ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದೆ. ಆದರೆ ಇವರು ಭಾರತದ ಯಾವ ರಾಜ್ಯಕ್ಕೆ ಸೇರಿದವರೆಂದು ಇನ್ನಷ್ಟೇ ಪತ್ತೆಯಾಗಬೇಕಿದೆ. ಹಾಗೂ ಯಾವ ಹಡಗಿನಿಂದ ಇವರು ಎಸೆಯಲ್ಪಟ್ಟಿದ್ದರು ಎಂದು ಕೂಡಾ ತಿಳಿದು ಬಂದಿಲ್ಲ

  ಕೆಟ್ಟ ಹವಮಾನದಿಂದ ಹಮ್ರಿಯದಲ್ಲಿ ಕಳೆದ ದಿವಸ ಹಡಗು ದಡಕ್ಕೆ ಬಡಿದಿತ್ತು. ಐದು ಹಡಗುಗಳು ಈ ರೀತಿ ಶಾರ್ಜಾದ ಹಿರಾ, ಹಮ್ರಿಯ, ಉಮ್ಮುಲ್ ಕುವೈನ್ ತೀರಕ್ಕೆ ಢಿಕ್ಕಿಯಾಗಿದ್ದವು. ಆದರೆ ಇದರಿಂದ ಜನರು ಕಡಲಿಗೆ ಬಿದ್ದ ಕುರಿತು ವರದಿಯಾಗಿರಲಿಲ್ಲ. ಹಡಗು ದಡಕ್ಕೆ ಢಿಕ್ಕಿಯಾದ ಕೂಡಲೇ ಕರಾವಳಿ ರಕ್ಷಣಾ ದಳ ಎಲ್ಲ ರೀತಿಯ ಸಹಾಯ ಒದಗಿಸಿತ್ತು. ಹಡಗಿನ ನೌಕರರನ್ನು ಅವರ ಊರಿಗೆ ಕಳುಹಿಸುವುದಕ್ಕೆ ಅಗತ್ಯ ಏರ್ಪಾಟು ಮಾಡಿತ್ತು. ರವಿವಾರ ಕರಾವಳಿ ರಕ್ಷಣಾದಳ ಸಮುದ್ರದಲ್ಲಿ ಹುಡುಕಾಟ ನಡೆಸುವ ವೇಳೆ ಮೃತದೇಹಗಳು ಪತ್ತೆಯಾಗಿವೆ. ಕೂಡಲೇ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದೆ.

ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕವಷ್ಟೇ ಮೃತಪಟ್ಟವರ ಪೂರ್ಣ ವಿವರಗಳು ದೊರೆಯಬಹುದೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News