×
Ad

ರಿಯಾದ್‌ನಲ್ಲಿ ಒಂಟೆಗಳ ಬೃಹತ್ ಪರಂಪರೆ ಉತ್ಸವ

Update: 2017-02-08 19:45 IST

ಜಿದ್ದಾ, ಫೆ. 8: ಸೌದಿ ಅರೇಬಿಯದ ರಾಜಧಾನಿ ರಿಯಾದ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ ಮಝಯೆನ್ ಅಲ್-ಇಬಲ್ ಪರಂಪರೆ ಉತ್ಸವ ಮತ್ತು ಒಂಟೆ ಸೌಂದರ್ಯ ಸ್ಪರ್ಧೆಯಲ್ಲಿ 30,000ಕ್ಕೂ ಅಧಿಕ ಒಂಟೆಗಳು ಭಾಗವಹಿಸಲಿವೆ.

ಉತ್ಸವದಲ್ಲಿ ಜಗತ್ತಿನೆಲ್ಲೆಡೆಯಿಂದ 20 ಲಕ್ಷಕ್ಕೂ ಅಧಿಕ ಪ್ರೇಕ್ಷಕರು ಭಾಗವಹಿಸಲಿದ್ದಾರೆ. ದೊರೆ ಅಬ್ದುಲಝೀಝ್ ದರಟ್ ಅಕಾಡಮಿ ಅಯೋಜಿಸುವ ಉತ್ಸವವು ಮಾರ್ಚ್ 19ರಿಂದ ಎಪ್ರಿಲ್ 15ರವರೆಗೆ ನಡೆಯಲಿದೆ.

ಬೆಡುಯಿನ್ ಇತಿಹಾಸದಲ್ಲಿ ಒಂಟೆಗಳು ವಹಿಸಿರುವ ಪಾತ್ರವನ್ನು ನೆನೆಯಲು ಹಾಗೂ ಪರಿಶುದ್ಧ ಅರೇಬಿಯನ್ ಒಂಟೆಗಳ ತಳಿಗಳನ್ನು ಸಂರಕ್ಷಿಸಲು ಈ ಉತ್ಸವವನ್ನು ನಡೆಸಲಾಗುತ್ತಿದೆ.

ಇಂದು ಸಾರಿಗೆ ಕ್ಷೇತ್ರದಲ್ಲಿ ಒಂಟೆಗಳ ಸ್ಥಾನವನ್ನು ಕಾರುಗಳು ವಹಿಸಿಕೊಂಡಿವೆಯಾದರೂ, ಐತಿಹಾಸಿಕವಾಗಿ ಮತ್ತು ಇಂದಿನ ದಿನದವರೆಗೂ ಒಂಟೆಗಳೊಂದಿಗಿನ ತಮ್ಮ ವಿಶೇಷ ಬಾಂಧವ್ಯವನ್ನು ಅರೇಬಿಯನ್ ಪರ್ಯಾಯ ದ್ವೀಪದ ಕುಟುಂಬಗಳು ಮತ್ತು ಬುಡಕಟ್ಟು ಪಂಗಡಗಳು ನೆನೆಯುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News