ಎಸ್.ಡಿ.ಪಿ.ಐ ನಿಯೋಗದಿಂದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಭೇಟಿ
ದುಬೈ: ಸೋಷಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ನಿಯೋಗವು ಫೆ. 5 ರಂದು ದುಬೈಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹಾಗೂ ಜೆ.ಡಿ.ಎಸ್ ಪಕ್ಷದ ನಾಯಕರಾದ ಝಫರುಲ್ಲಾ ಖಾನ್, ಬಿ.ಎ ಫಾರೂಕ್ ರವರನ್ನು ಭೇಟಿಯಾಗಿ ಅನಿವಾಸಿ ಭಾರತೀಯರ ಸಮಸ್ಯೆಗಳು ಮತ್ತು ಮುಂಬರುವ ವಾರ್ಷಿಕ ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ ವಿಶೇಷವಾಗಿ ಮುಸ್ಲಿಮರಿಗೆ ಸಾಕಷ್ಟು ನಿಧಿ ನಿಯೋಜಿಸುವಂತೆ ಸರಕಾರದ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಲಾಯಿತು.
ದೇಶದ ಚುನಾವಣೆಯಲ್ಲಿ ಅನಿವಾಸಿ ಭಾರತೀಯರಿಗೆ ಅಂಚೆ ಮತ್ತು ಇ ಮತದಾನವನ್ನು ಸಕ್ರಿಯಗೊಳಿಸಿ, ಇದರ ಸುಸೂತ್ರ ಮತ್ತು ಸುರಕ್ಷಿತ ಅನುಷ್ಠಾನಕ್ಕಾಗಿ ಕಾನೂನಿನಲ್ಲಿ ಅಗತ್ಯ ತಿದ್ದುಪಡಿಯನ್ನು ಮಾಡಲು ಎಲ್ಲಾ ರಾಜಕೀಯ ಪಕ್ಷಗಳು ಒಮ್ಮತದಿಂದ ಶ್ರಮಿಸಬೇಕಾಗಿ ಒತ್ತಾಯಿಸಲಾಯಿತು.
ಕರ್ನಾಟಕ ಸರಕಾರ ಇತ್ತೀಚೆಗೆ ಪರಿಚಯಿಸಿದ NRK ಕಾರ್ಡುಗಳಲ್ಲಿ ಸಾಮಾನ್ಯ ಜನರಿಗೆ ಹೆಚ್ಚು ಪ್ರಯೋಜನಗಳನ್ನು ಸೇರಿಸುವುದು ಮತ್ತು NRI ಸೆಲ್ ಪ್ರತ್ಯೇಕವಾಗಿ ಅನಿವಾಸಿ ಕನ್ನಡಿಗರ ಹಾಗೂ ಅವರ ಕುಟುಂಬದ ಸದಸ್ಯರ ದೂರುಗಳನ್ನು ಮಾತ್ರ ನಿಭಾಯಿಸುವಂತೆ ಆಗ್ರಹಿಸಲಾಯಿತು.
ಅನಿವಾಸಿ ಕನ್ನಡಿಗರ ಪರಿಸ್ಥಿತಿಯನ್ನು NRI ಸೆಲ್ ಮುಖ್ಯಸ್ಥರಿಗೆ ವಿವರಿಸುವಂತೆ ಮತ್ತು ವೀಸಾ ವಂಚನೆ, ಮ್ಯಾನ್ ಪವರ್ ಸಂಸ್ಥೆಗಳ ಮೋಸದ ಜಾಲ ಮತ್ತು ವಿದೇಶಗಳಿಗೆ ಮಹಿಳೆಯರ ಕಳ್ಳ ಸಾಗಣೆ ಸಂಬಂಧಿಸಿದ ದೂರುಗಳ ವಿಚಾರಣೆಯನ್ನು NRI ಸೆಲ್ ವ್ಯಾಪ್ತಿಗೆ ಸೇರಿಸಬೇಕಾಗಿ ನಿಯೋಗದ ಮೂಲಕ ಮಾನ್ಯ ಕುಮಾರಸ್ವಾಮಿಯವರಲ್ಲಿ ಮನವಿ ಮಾಡಲಾಯಿತು.
ಎಸ್.ಡಿ.ಪಿ.ಐ ನಿಯೋಗದಲ್ಲಿ ನಾಸಿರ್ ನಂದಾವರ, ನಾಸಿರ್ ಕಾವಲ್ ಕಟ್ಟೆ, ಆಶಿರ್ ಚೊಕ್ಕಬೆಟ್ಟು, ಜಾವೇದ್ ಸುರತ್ಕಲ್, ರಿಯಾಝ್ ಸಜಿಪ, ಮುಹಮ್ಮದ್ ಶಾಫಿ ಹುಬ್ಬಳ್ಳಿ ಮತ್ತು ದುಬೈಯ ಪ್ರಖ್ಯಾತ ಯುವ ಉದ್ಯಮಿ ಅಲ್ತಾಫ್ ಡೈಮಂಡ್ ಜೊತೆಗಿದ್ದರು.